ಕೂಗು ನಿಮ್ಮದು ಧ್ವನಿ ನಮ್ಮದು

SSLC, PUC ಎಕ್ಸಾಂ ಕೆಲಸ ಮಾಡೋ ಶಿಕ್ಷಕರಿಗೆ ಹಿಜಾಬ್ ನಿಷೇಧ

ಬೆಂಗಳೂರು: SSLC ಹಾಗೂ PUC ಪರೀಕ್ಷೆ ಸಮಯದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುವ ಉಪನ್ಯಾಸಕರು ಹಿಜಾಬ್ ಧರಿಸಿ ಹಾಜರಾಗುವಂತಿಲ್ಲ ಎಂದು ಶಿಕ್ಷಣ ಇಲಾಖೆ ಮೌಖಿಕ ನಿರ್ದೇಶನ ನೀಡಿದೆ. ಪರೀಕ್ಷಾ ಸಮಯದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುವ ಉಪನ್ಯಾಸಕರಿಗೆ ಸದ್ಯ ಯಾವುದೇ ಡ್ರೆಸ್ ಕೋಡ್ ಅನ್ನು ನೀಡಲಾಗಿಲ್ಲ. ಆದ್ರು ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ಉಂಟಾಗಬಾರದೆಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.
ಉಪನ್ಯಾಸಕರು ಹಿಜಾಬ್ ತೆಗೆದು ಪರೀಕ್ಷಾ ಕೆಲಸಕ್ಕೆ ಹಾಜರಾದರೆ ಮಾತ್ರವೇ ಅವರಿಗೆ ಕೆಲಸಕ್ಕೆ ಅವಕಾಶ ನೀಡಬೇಕು. ಒಂದು ವೇಳೆ ಉಪನ್ಯಾಸಕರು ಹಿಜಾಬ್ ತೆಗೆಯದೇ ಬಂದಲ್ಲಿ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಲು ಇಲಾಖೆ ನಿರ್ಧರಿಸಿದೆ. 

SSLC ಪರೀಕ್ಷೆ ಪ್ರಾರಂಭವಾದ ಮೊದಲ ದಿನ ಶಿಕ್ಷಕಿಯೊಬ್ಬರು ಹಿಜಾಬ್ ಧರಿಸಿ ಬಂದಿದ್ದ ಘಟನೆ ನಡೆದಿತ್ತು. ಆ ಸಂದರ್ಭ ಶಿಕ್ಷಕಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿತ್ತು. ಮುಂದೆಯೂ ಈ ರೀತಿ ನಡೆದಲ್ಲಿ ಇದೇ ನಿಯಮ ಮುಂದುವರಿಸುವಂತೆ ತಿಳಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ SSLC ಪರೀಕ್ಷೆ ಮತ್ತು ಏಪ್ರಿಲ್ ಅಂತ್ಯದಿಂದ ಪ್ರಾರಂಭವಾಗಲಿರುವ ದ್ವೀತಿಯ ಪಿಯುಸಿ ಪರೀಕ್ಷೆಗೂ ಈ ನಿಯಮ ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ನಿಷೇಧ ಏಕೆ?
ಸದ್ಯ ಶಿಕ್ಷಕರು, ಉಪನ್ಯಾಸಕರಿಗೆ ಡ್ರೆಸ್ ಕೋಡ್ ಇಲ್ಲ. ಆದ್ರು ಇದೊಂದು ಸೂಕ್ಷ್ಮ ವಿಚಾರವಾಗಿದೆ. ಶಿಕ್ಷಕರು ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ಧರಿಸಿ ಕೆಲಸಕ್ಕೆ ಬಂದರೆ ಮಕ್ಕಳ ಮೇಲೆ ಪರಿಣಾಮ ಬೀರುವ ಆತಂಕವಿದೆ.  ಈಗಾಗಲೇ ವಿದ್ಯಾರ್ಥಿಗಳಿಗೆ ಹಿಜಾಬ್ ನಿಷೇಧ ಹಾಕಲಾಗಿದೆ. ಶಿಕ್ಷಕಿಯರಿಗೆ ಹಿಜಾಬ್ ಧರಿಸಲು ಅವಕಾಶ ಕೊಟ್ಟರೆ ವಿವಾದ ಮತ್ತೆ ಪ್ರಾರಂಭವಾಗುವ ಆತಂಕವಿದೆ. ಶಿಕ್ಷಕರಿಗೆ ಡ್ರೆಸ್ ಕೋಡ್ ಇಲ್ಲದೇ ಇರುವುದರಿಂದ ಹಿಜಾಬ್ ಬಗ್ಗೆಯೂ ಯಾವುದೇ ಕ್ರಮ ಇಲ್ಲ. ಆದರೂ ಹಿಜಾಬ್ ಧರಿಸಿ ಬರುವ ಶಿಕ್ಷಕರನ್ನು ಪರೀಕ್ಷಾ ಕೆಲಸದಿಂದ ಬಿಡುಗಡೆ ಮಾಡಲು ಇಲಾಖೆ ಸೂಚನೆ ನೀಡಿದೆ.

error: Content is protected !!