ದಾಸವಾಳದ ಹೂವು: ಬಾಯಾರಿಕೆ ಕಡಿಮೆ ಮಾಡಲು ತಂಪು ಪಾನೀಯ ಕುಡಿಯಬೇಕು ಎನಿಸಿದಾಗ ಕೆಮಿಕಲ್ ಮಿಶ್ರಿತ ಕೂಲ್ ಡ್ರಿಂಕ್ಸ್ ಕುಡಿಯುವ ಬದಲು ನೈಸರ್ಗಿಕ ಜ್ಯೂಸ್ ಮಾಡಿ ಕುಡಿದರೆ ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು. ಅದರಲ್ಲೂ ಬೆಸಿಗೆಯಲ್ಲಿ ದಾಸವಾಳ ಹೂವಿನ ಜ್ಯೂಸ್ ಕುಡಿದ್ರೆ ಆರೋಗ್ಯಕ್ಕೆ ಬಹಳ ಒಳ್ಳೆದು. ಶೀತ, ಕೆಮ್ಮು ಮತ್ತು ತಲೆನೋವು ಕಾಣಿಸಿಕೊಂಡಾಗ ದಾಸವಾಳ ಹೂವನ್ನು ತಿಂದರೆ ಅಥವಾ ಟೀ ಮಾಡಿ ಕುಡಿದ್ರೆ ತಲೆ ನೋವು ತಕ್ಷಣ ಕಡಿಮೆಯಾಗುತ್ತದೆ.
ಹೊಟ್ಟೆ ಹಸಿವು ಸರಿಯಾದ ರೀತಿಯಲ್ಲಿ ಆಗಲು ದಾಸವಾಳವನ್ನು ತಿನ್ನುವುದು ಒಳ್ಳೆಯದು. ಇದರಿಂದ ಯಾವುದೇ ರೀತಿಯ ಸೈಡ್ ಎಪೆಕ್ಟ್ಸ ಇರುವುದಿಲ್ಲಾ. ಎಣ್ಣೆಯಲ್ಲಿ ದಾಸವಾಳ ಹೂವನ್ನು ಹಾಕಿ ಕಾಯಿಸಿ, ಆ ಎಣ್ಣೆಯನ್ನು ಕೂದಲಿಗೆ ಬಳಸಿದ್ರೆ ಕೂದಲು ಉದುರುವುದು ನಿಲ್ಲುತ್ತದೆ. ಈ ಹೂವಿನಿಂದ ತೆಗೆದ ರಸ ಕೂದಲಿಗೆ ಹೊಳಪು ನೀಡಿ ಉತ್ತಮ ಕಂಡೀಶನರ್ ನಂತೆ ವರ್ತಿಸುತ್ತದೆ. ಜೊತೆಗೆ ತಲೆಹೊಟ್ಟು ನಿವಾರಿಸಿ, ಇದು ಕೂದಲಿಗೆ ಕಪ್ಪು ಬಣ್ಣ ನೀಡುತ್ತದೆ.
ದಾಸವಾಳ ಎಲೆಯ ಲೋಳೆ ತಲೆಗೆ ಬಳಸುವುದರಿಂದ ಕೂದಲು ಪಳ ಪಳ ಹೋಳೆಯುತ್ತದೆ. ಬಾಡಿ ಹೀಟ್ ಆಗಿದ್ದರೆ ಅದನ್ನು ಕಮ್ಮಿ ಮಾಡಲು ದಾಸವಾಳ ಹೂವಿನ ಜ್ಯೂಸ್ ಕುಡಿದರೆ ಒಳ್ಳೆಯದು. ದಾಸವಾಳದ ಹೂವಿನಲ್ಲಿ ತಂಪು ನೀಡುವ ಅಂಶ ಹೆಚ್ಚಿರುವುದರಿಂದ, ಅದು ಕಣ್ಣುಗಳನ್ನು ಆಯಾಸದಿಂದ ಮುಕ್ತವಾಗಿರಿಸಿ, ತಂಪನ್ನು ನೀಡುತ್ತದೆ.
ದಾಸವಾಳದ ಹೂವಿನ ಜ್ಯೂಸ್ ಮಾಡಿ ಕುಡಿಯುವುದರಿಂದ ಮೊಡವೆಯನ್ನು ತಡೆಯಬಹುದು ದೇಹದಲ್ಲಿ ನೀರಿನ ಅಂಶ ಕೊರತೆ ಇರುವವರು, ಮತ್ತು ಡ್ರೈಸ್ಕಿನ್ ಇರುವವರು ದಾಸವಾಳ ಹೂವಿನ ಜ್ಯೂಸ್ ಕುಡಿಯುವುದು ಉತ್ತಮ.
ಪ್ರತಿ ದಿನಾ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಬರುವುದನ್ನು ತಡೆಯಬಹುದು. ಈ ಜ್ಯೂಸ್ ನಿಮ್ಮ ತ್ವಚೆ ಕಾಂತಿಯನ್ನೂ ಹೆಚ್ಚಿಸುತ್ತದೆ. ದೇಹದಲ್ಲಿ ನೀರಿನಂಶ ಕಮ್ಮಿಯಾಗದಂತೆ ನೋಡಿಕೊಳ್ಳುತ್ತದೆ.