ರಾಯಚೂರು: ಮಂತ್ರಾಲಯದಲ್ಲಿ ರಾಯರ ಆರಾಧನೆ
ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯದಲ್ಲಿ ಈಗ ರಾಯರ ಆರಾಧನೆಯ ಸಂಭ್ರಮ ಮನೆಮಾಡಿದ್ದು, ಮಹಾ ರಥೋತ್ಸವ ಮೂಲಕ ಇಂದು ವಿದ್ಯುಕ್ತ ತೆರೆ ಬೀಳಲಿದೆ. ಆರಾಧನೆಯ ಸಂಭ್ರಮದ ಕೊನೆಯ ದಿನವಾದ ಇಂದು ಉತ್ತರರಾಧನೆಯಾಗಿ ಮಂತ್ರಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನ ನೇರವೇರಿಸಲಾಗುತ್ತಿದೆ. ಉತ್ಸವ ಮೂರ್ತಿ ಪ್ರಹಲ್ಲಾದ ರಾಜರ ರೂಪದಲ್ಲಿ ರಾಯರು ಇಂದು ಭಕ್ತರಿಗೆ ಬಹಿರ್ಮುಖ ದರ್ಶನ ನೀಡಿ ಆಶಿರ್ವದಿಸುತ್ತಾರೆ ಅನ್ನೋ ನಂಬಿಕೆಯಿದೆ. ಉತ್ಸವ ಮೂರ್ತಿಯನ್ನ ರಥೋತ್ಸವಕ್ಕೂ ಮುನ್ನ ಸಂಸ್ಕೃತ ಪಾಠ ಶಾಲೆಗೆ ಮೆರವಣಿಗೆ ಮೂಲಕ ಕರೆದ್ಯೊಯ್ಯಲಾಗುವುದು. ಶಾಲೆಯ ಪಾಠಗಳನ್ನ ರಾಯರು ಪರಿಶೀಲಿಸುತ್ತಾರೆ ಅನ್ನೋ ನಂಬಿಕೆಯಿದೆ. ಬಳಿಕ ರಾಯರಿಗೆ ಓಕಳಿ ಎರಚಿ ಮಠದ ಪೀಠಾಧಿಪತಿಗಳು ವಸಂತೋತ್ಸವ ಆಚರಿಸುತ್ತಾರೆ. ಬಳಿಕ ಮಠದ ಬೀದಿಯಲ್ಲಿ ಮಹಾ ರಥೋತ್ಸವ ನಡೆಯಲಿದೆ.