ಹುಬ್ಬಳ್ಳಿ: ವಿದ್ಯುತ್ ಎಂಜಿನ್ನಿಂದ ನಾಲ್ಕು ರೈಲುಗಳ ಸಂಚಾರ ಆರಂಭವಾಗಿದ್ದು, ನಿತ್ಯ 5 ಸಾವಿರ ಲೀಟರ್ ಡೀಸೆಲ್ ಉಳಿತಾಯ ಆಗಲಿದೆ.
ನೈರುತ್ಯ ರೈಲ್ವೆಯ ನಾಲ್ಕು ರೈಲುಗಳು ವಿದ್ಯುತ್ ಎಂಜಿನ್ನಿಂದ ಸಂಚಾರ ಆರಂಭಿಸಿದ್ದು, ತಿರುಪತಿ– ಕೊಲ್ಲಾಪುರ (17415) ಮತ್ತು ಕೊಲ್ಲಾಪುರ–ತಿರುಪತಿ ಎಕ್ಸ್ಪ್ರೆಸ್ (17416), ಎಸ್ಎಸ್ಎಸ್ ಹುಬ್ಬಳ್ಳಿ – ಎಂಜಿಆರ್ ಚೆನ್ನೈ ಸೆಂಟ್ರಲ್ – ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ ಪ್ರೆಸ್ (17313/ 17314), ಮೈಸೂರು – ಕೆಎಸ್ಆರ್ ಬೆಂಗಳೂರು– ಧರ್ಮಾವರಂ– ಗುಂತಕಲ್– ರಾಯಚೂರು– ವಾಡಿ, ಕಲಬುರಗಿ ಹಾಗೂ ಸೊಲ್ಲಾಪುರದ ಹರಿಪ್ರಿಯ ಎಕ್ಸ್ಪ್ರೆಸ್ ವಿದ್ಯುತ್ ಎಂಜಿನ್ನಿಂದ ಸಂಚರಿಸಲಿರುವ ರೈಲುಗಳು.
ನೈರುತ್ಯ ರೈಲ್ವೆಯಲ್ಲಿ ಎರಡು ವರ್ಷಗಳಲ್ಲಿ ಪ್ರತಿ ವರ್ಷ 24 ರೈಲುಗಳಂತೆ ಒಟ್ಟು 48 ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್ನೊಂದಿಗೆ ಸಂಚರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ 26 ರೈಲುಗಳನ್ನು ಎಲೆಕ್ಟ್ರಿಕ್ ಲೋಕೋಮೋಟಿವ್ನಿಂದ ಸಂಚರಿಸಲು ಎಲೆಕ್ಟ್ರಿಕ್ ಟ್ರ್ಯಾಕ್ಷನ್ನಲ್ಲಿ ಪರಿವರ್ತನೆ ಮಾಡಲಾಗಿದ್ದು, ಏಪ್ರಿಲ್ 2021ರಿಂದ ಇಲ್ಲಿಯವರೆಗೆ ತನ್ನ ಸಂಪರ್ಕ ಜಾಲದ 511.7 ಕೀ.ಮೀ.ಗಳ ವಿದ್ಯುದೀಕರಣ ಪೂರ್ಣಗೊಳಿಸಲಾಗಿದೆ