ಕೂಗು ನಿಮ್ಮದು ಧ್ವನಿ ನಮ್ಮದು

ರಾಜ್ಯಾದ್ಯಂತ SSLC ಪರೀಕ್ಷೆ ಆರಂಭ: ಎರಡು ವರ್ಷದ ನಂತರ ನಿರಾಂತಕವಾಗಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಆರಂಭವಾಗಿವೆ. ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೂ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದೆ. ಎರಡು ವರ್ಷಗಳ ಬಳಿಕ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯುತ್ತಿದ್ದಾರೆ.

  • ಇನ್ನು ರಾಜ್ಯದಲ್ಲಿ ಒಟ್ಟು 8,73,846 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.
  • ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳ ಸಂಖ್ಯೆ ಈ ಕೆಳಗಿನಂತಿದೆ.
  • ಹೊಸದಾಗಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು: 8,20,888
  • ಖಾಸಗಿ ವಿದ್ಯಾರ್ಥಿಗಳು: 46,200
  • ಗಂಡು ಮಕ್ಕಳು: 4,52,732
  • ಹೆಣ್ಣು ಮಕ್ಕಳು: 4,21,110
  • ತೃತೀಯ ಲಿಂಗಿಗಳು: 04
  • ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು: 5,307
  • ಪರೀಕ್ಷೆಗೆ ನೋಂದಾಯಿತ ಒಟ್ಟು ಶಾಲೆಗಳ ಸಂಖ್ಯೆ: 15,387
  • ಸರ್ಕಾರಿ: 5,717
  • ಅನುದಾನಿತ: 3,412
  • ಅನುದಾನ ರಹಿತ: 6,258
  • ಪರೀಕ್ಷಾ ಕೇಂದ್ರಗಳ ಒಟ್ಟು ಸಂಖ್ಯೆ 3,444
  • ಸರ್ಕಾರಿ: 1357
  • ಅನುದಾನಿತ: 1009
  • ಅನುದಾನಿತ ರಹಿತ: 978
  • ಸಾಮಾನ್ಯ ಕೇಂದ್ರಗಳು: 3,275
  • ಖಾಸಗಿ ಕೇಂದ್ರಗಳು: 169
  • ರಾಜ್ಯದಲ್ಲಿ ಪರೀಕ್ಷೆಗಾಗಿ 45,289 ಪರೀಕ್ಷಾ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ.
  • 3,444 ಮುಖ್ಯ ಅಧಿಕ್ಷಕರಗಳ ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದೆ.
  • 49,817 ಕೊಠಡಿ ಮೇಲ್ವಿಚಾರಕರು ಎಸ್.ಎಸ್.ಎಲ್.ಸಿ ಪರೀಕ್ಷೆಯ ನೇತೃತ್ವ ವಹಿಸಲಿದ್ದಾರೆ.
  • ಪರೀಕ್ಷೆ ವೇಳೆ ಹಿಜಾಬ್, ಕೇಸರಿ ಶಾಲು ಸೇರಿ ಯಾವುದಕ್ಕೂ ಇಲ್ಲ ಅವಕಾಶ ಇರುವುದಿಲ್ಲ.
  • ಪರೀಕ್ಷಾ ಕೇಂದ್ರದ 200 ಮೀ ವ್ಯಾಪ್ತಿಯಲ್ಲಿ ಕಲಂ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
  • ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
  • ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.
error: Content is protected !!