ಕೂಗು ನಿಮ್ಮದು ಧ್ವನಿ ನಮ್ಮದು

ಮೊದಲು ಮಕ್ಕಳ ಭವಿಷ್ಯ ಮುಖ್ಯ, ಆಮೇಲೆ ರಾಜಕೀಯ: ಡಿ.ಕೆ.ಶಿವಕುಮಾರ್

ಚಿಕ್ಕಬಳ್ಳಾಪುರ: ಪಸ್ಟ್ ಮಕ್ಕಳ ವಿದ್ಯಾಭ್ಯಾಸ ಅವರ ಭವಿಷ್ಯ ಮುಖ್ಯ. ರಾಜಕೀಯ ಆಮೇಲೆ ಎಂದು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ರು. ದೆಹಲಿಯಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು ಹಿಜಾಬ್ ತೀರ್ಪು ಕುರಿತಂತೆ ಮಾದ್ಯಮದವರ ಜೊತೆಗೆ ಮಾತನಾಡಿ, ತೀರ್ಪಿನ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕಿದೆ. ಯಾವುದೇ ರಾಜಕೀಯ ಪಕ್ಷ ತೀರ್ಪುನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದು. ಆದ್ರೆ ತೀರ್ಪು ತೀರ್ಪೆ ತೀರ್ಪನ್ನು ಎಲ್ಲರೂ ಸಹ ಗೌರವದಿಂದ ಸ್ವೀಕಾರ ಮಾಡಬೇಕು ಎಂದು ಡಿಕೆಶಿ ಹೇಳಿದರು.

ತೀರ್ಪಿನಲ್ಲಿ ಮಾಡಿರುವ ಸಂಪೂರ್ಣವಾದ ಉಲ್ಲೇಖಗಳನ್ನು ನೋಡದೇ ನಾನು ರಾಜಕೀಯ ಪಕ್ಷದ ರಾಜ್ಯಾಧ್ಯಕ್ಷನಾಗಿ ಪ್ರತಿಕ್ರಿಯೆ ನೀಡಲಾರೆ. ನಮ್ಮ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುತ್ತೇನೆ. ನಮಗೆ ಶಾಂತಿ ಬೇಕು, ಮಕ್ಕಳ ವಿದ್ಯಾಭ್ಯಾಸ ಮುಖ್ಯವೇ ಹೊರತು ರಾಜಕೀಯ ವಲ್ಲ ಮಿಕಿದ್ದೆಲ್ಲ ಆಮೇಲೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ರು. ಮತ್ತೊಂದೆಡೆ ಹಿಜಾಬ್ ಕುರಿತಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, ಹಿಜಾಬ್ ವಿವಾದದಲ್ಲಿ ನನ್ನ ಪ್ರಮುಖ ಕಾಳಜಿ ಶಿಕ್ಷಣ, ಕಾನೂನು ಹಾಗೂ ಸುವ್ಯವಸ್ಥೆಯಾಗಿದೆ.

ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಆದ್ರೆ ಶಿಕ್ಷಣ, ಕಾನೂನು ಹಾಗೂ ಸುವ್ಯವಸ್ಥೆ, ಕೋಮು ಸೌಹಾರ್ದತೆಯ ಜವಾಬ್ದಾರಿ ಇನ್ನೂ ಕರ್ನಾಟಕ ಸರ್ಕಾರದ ಮೇಲಿದೆ ಎಂದಿದ್ದಾರೆ. ನಾನು ಕರ್ನಾಟಕ ಸರ್ಕಾರಕ್ಕೆ ಪ್ರಬುದ್ಧ ನಾಯಕತ್ವವನ್ನು ಪ್ರದರ್ಶಿಸಲು ಹಾಗೂ ಖಚಿತಪಡಿಸಿಕೊಳ್ಳಲು ಮನವಿ ಮಾಡುತ್ತೇನೆ.
*ಶಾಲೆಗಳು ಮತ್ತು ಕಾಲೇಜುಗಳ ಸುತ್ತಮುತ್ತ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಬೇಕಾಗುತ್ತದೆ.
*ಧರ್ಮ ಮತ್ತು ಲಿಂಗದ ಲೆಕ್ಕದ ಮೇಲೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ.
3) ಕೋಮು ಸೌಹಾರ್ದತೆ ಇದೆ.

error: Content is protected !!