ಕೂಗು ನಿಮ್ಮದು ಧ್ವನಿ ನಮ್ಮದು

ಹೆರಿಗೆ ಸಮಯದಲ್ಲಿ ತಾಯಿ ಸಾವು, ತಬ್ಬಲಿಯಾದ ನವಜಾತ ಶಿಶು

ಚಿಕ್ಕಬಳ್ಳಾಪುರ: ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯತೆಯಿಂದ ತಾಯಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ ಮೃತಳ ಕುಟುಂಬಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆ ಎದುರು ಸಂಭವಿಸಿದೆ. ಇದೀಗ ತಾಯಿಯನ್ನು ಕಳೆದುಕೊಂಡು ನವಜಾತ ಶಿಶು ಅನಾಥವಾಗಿದೆ. ಇದರಿಂದ ಸಿಟ್ಟಿಗೆದ್ದ ಕುಟುಂಬಸ್ಥರು ವೈದ್ಯರ ವಿರುದ್ಧ ಸರ್ಕಾರಿ ತಾಯಿ ಮಗು ಆಸ್ಪತ್ರೆ ಎದುರಿಗೆ ಪ್ರತಿಭಟನೆ ನಡೆಸಿದ್ರು.

ತಾಲೂಕಿನ ಬೈರಾಪುರ ಗ್ರಾಮದ ಸವಿತಾ(22) ಮೃತ ಮಹಿಳೆ. ಹೆರಿಗೆಗಾಗಿ ತಾಯಿ, ಮಗು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಮಹಿಳೆ ಆಧಿಕ ರಕ್ತಸ್ರಾವದಿಂದ ಹೆರಿಗೆಯಾದ ಕ್ಷಣದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಮೃತಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಹೊಟ್ಟೆಯಲ್ಲಿದ್ದ ಮಗು ನಾಲ್ಕು ಕೆ.ಜಿ. ತೂಕ ಇದ್ದು ಹೆರಿಗೆ ಮಾಡಿಸುವುದು ಸವಾಲಿನ ಕೆಲಸವಾಗಿತ್ತು. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರೆ, ನಾವು ಕರೆದುಕೊಂಡು ಹೋಗುತ್ತಿದ್ದೇವು. ಆದ್ರೆ ವೈದ್ಯರು ಇಲ್ಲಿಯೇ ಹೆರಿಗೆ ಮಾಡುವುದ್ದಾಗಿ ಧೈರ್ಯ ಹೇಳಿ ಕೊನೆಗೆ ಜೀವವನ್ನು ತೆಗೆದಿದ್ದಾರೆ. ಹುಟ್ಟಿದ ಕ್ಷಣದಲ್ಲಿ ಮಗುವಿಗೆ ತಾಯಿ ಇಲ್ಲದಂತೆ ಮಾಡಿದ್ದಾರೆ ಎಂದು ಮೃತಳ ಗಂಡ ರಮೇಶ್ ಆರೋಪಿಸಿದ್ದಾನೆ.

error: Content is protected !!