ಕೂಗು ನಿಮ್ಮದು ಧ್ವನಿ ನಮ್ಮದು

ಕಾರ್ ಪಾರ್ಕಿಂಗ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ

ಧಾರವಾಡ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ 2 ಕುಟುಂಬಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಹತ್ತಿರ ಸಂಭವಿಸಿದೆ. ಕಳೆದ ಸುಮಾರು ದಿನಗಳಿಂದ ಉಣಕಲ್ ಭಾಗದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಜನರು ದಿನವೂ ಹೊಡೆದಾಡುವ ಪ್ರಸಂಗಗಳು ಗೋಚರಿಸುತ್ತವೆ.

ಸಾರ್ವಜನಿಕರೊಬ್ಬರು ರಸ್ತೆ ಮುಂದಿನ ಮನೆಯ ಮುಂದೆ ಕಾರ್ ಪಾರ್ಕ್ ಮಾಡಿ ಹೋಟೆಲ್‌ಗೆ ಹೋಗಿದ್ದಾರೆ. ಈ ಸಮಯದಲ್ಲಿ ಇದಕ್ಕೆ ಕೋಪಗೊಂಡ ಮನೆಯವರು ಕಾರಿನ ಗ್ಲಾಸ್ ಒಡೆದು ಕಾರ್ ಚಾಲಕನಿಗೆ ಹೊಡೆದಿದ್ದಾರೆ. ತದನಂತರ ಕಾರ್ ಚಾಲಕ ಪುನಃ ತನ್ನ ಸ್ನೇಹಿತರ ಜೊತೆಗೆ ಬಂದು ಜಗಳ ತಗೆದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದಾರೆ.

error: Content is protected !!