ಕೂಗು ನಿಮ್ಮದು ಧ್ವನಿ ನಮ್ಮದು

ಕಳೆದ ನಾಲ್ಕು ದಿನಗಳಿಂದ ಮಗ ಸಂಪರ್ಕಕ್ಕೆ ಸಿಗುತ್ತಿಲ್ಲ: ಪೋಷಕರ ಆತಂಕ

ಮಡಿಕೇರಿ: ರಷ್ಯಾ ಉಕ್ರೇನ್ ಯುದ್ಧ ಪ್ರಾರಂಭವಾಗಿ ಇಂದಿಗೆ 8 ದಿನಗಳಾಗಿದ್ದು, ಹಾವೇರಿಯ ನವೀನ್ ಸಾವಿನಪ್ಪಿದ ನಂತರ ಇದೀಗ ಪೋಷಕರಲ್ಲಿ ಅತಂಕ ಮನೆ ಮಾಡಿದೆ. ಅದರಲ್ಲೂ ಕೊಡಗಿನ ಓರ್ವ ವಿದ್ಯಾರ್ಥಿಯೊಬ್ಬರು ಸಂಪರ್ಕಕ್ಕೆ ಸಿಗದೇ ಅವರ ಕುಟುಂಬ ವರ್ಗದಲ್ಲಿ ಆತಂಕ ಸೃಷ್ಟಿಯಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಮೊಹಮ್ಮದ್ ಯೂಸುಫ್ ಪುತ್ರ ಶಾರುಖ್, ಕಳೆದ 4 ದಿನಗಳಿಂದ ಸಂಪರ್ಕಕ್ಕೆ ಸಿಗದೇ ಇರುವುದರಿಂದ ಮನೆಯಲ್ಲಿ ಇರುವ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ನಮ್ಮ ಮಗ 4 ದಿನಗಳ ಕಾಲ ಬಂಕರ್‌ನಲ್ಲಿ ಆಸರೆ ಪಡೆದಿದ್ದ ಶಾರುಖ್ ಸೇರಿ ಒಟ್ಟು 20 ಯುವಕರು ಬಂಕರ್‌ನಲ್ಲಿ ಆಶ್ರಯ ಪಡೆದಿದ್ದರು. ಬಂಕರ್‌ನಲ್ಲಿ ಉಸಿರಾಟಕ್ಕೆ ತೊಂದರೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಯುವಕರು ಬಂಕರ್‌ನಿಂದ ಹೊರಬಂದು ರೈಲ್ವೇ ನಿಲ್ದಾಣದ ಕಡೆಗೆ ನಡೆದು ಹೊರಟಿದ್ದಾರೆ. ಸೋಮವಾರ ಸಂಜೆಯಿಂದ ಇದುವರೆಗೆ ಸಂಪರ್ಕಕ್ಕೆ ತಮ್ಮ ಮಗ ಬಂದಿಲ್ಲ. ಏನಾದರೂ ಮಾಡಿ ಪ್ರಾಣ ಉಳಿಸಿಕೊಂಡು ಬಂದರೆ ಸಾಕು ಎಂದು ಬೇಡುತ್ತಿರುವ ವಿದ್ಯಾರ್ಥಿಯ ತಂದೆ, ತಾಯಿ ದೇವರ ಮೇಲೆ ಭಾರ ಹಾಕಿ ಕಾಯುತ್ತಿದ್ದಾರೆ.

error: Content is protected !!