ಕೂಗು ನಿಮ್ಮದು ಧ್ವನಿ ನಮ್ಮದು

ಹರ್ಷ ಕೊಲೆ ಪ್ರಕರಣ, ಯಾವುದೇ ದೇಶದ್ರೋಹಿಯನ್ನು ಬಿಡೋ ಪ್ರಶ್ನೇಯೆ ಇಲ್ಲ, ಮಟ್ಟ ಹಾಕ್ತೀವಿ: ಆರ್. ಅಶೋಕ್

ಬೆಂಗಳೂರು: ಯಾವುದೇ ದೇಶದ್ರೋಹಿಯನ್ನು ಬಿಡೋದಿಲ್ಲ, ಮಟ್ಟ ಹಾಕುತ್ತೇವೆ. ಇನ್ನೂ ತನಿಖೆ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ ಪೊಲೀಸರು ಸೂಚಿಸಿದ್ದಾರೆ. ಇನ್ನೂ ಬೆದರಿಕೆ ಇದೆ ಅನ್ನೋದು ಸತ್ಯಾಸತ್ಯತೆ ತಿಳಿದು ಬಂದಿದೆ.

ಇದರಲ್ಲಿ PFI ಭಾಗಿಯಾಗಿದೆಯಾ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಇವತ್ತು ಚರ್ಚೆ ಮಾಡುತ್ತೇವೆ ಎಂದು ಆರ್.ಅಶೋಕ ಭರವಸೆ ನೀಡಿದ್ರು. ಈಶ್ವರಪ್ಪ ಕೊಲೆ ಮಾಡಿಸಿದ್ದಾರೆ ಎನ್ನುವ ವಿಚಾರವಾಗಿ ಮಾತನಾಡಿದ ಆರ್.ಅಶೋಕ, ನಾನು ಗೃಹ ಸಚಿವನಾಗಿ ಆಗಿ ಈ ಹಿಂದೆ ಕೆಲಸ ಮಾಡಿದ್ದೇನೆ. ಪೊಲೀಸ್ ಎನ್ನುವುದು ಸ್ವಾತಂತ್ರ ಸಂಸ್ಥೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದೆ. ಹಲವಾರು ಜನ ಸಲಹೆ ಕೊಡುತ್ತಿದ್ದಾರೆ, ಕೊಟ್ಟ ಸಲಹೆ ಗೌರವಯುತವಾಗಿ ತೆಗೆದುಕೊಳ್ಳುತ್ತೇವೆ.

ಜೊತೆಗೆ ಅಂತಿಮವಾಗಿ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತಾರೆ ಎಂದು ಆರ್.ಅಶೋಕ್ ಮಾಹಿತಿ ನೀಡಿದ್ರು. ಶಿವಮೊಗ್ಗ ಕೊಲೆ ಕುರಿತಾಗಿ ಒಬ್ಬೊಬ್ಬ ಸಚಿವರು ಒಂದೊಂದು ಹೇಳಿಕೆ ಕೊಡುತ್ತಿರುವುದು ಗಮನಕ್ಕೆ ಬಂದಿದೆ. ಅವರೆಲ್ಲರ ಜೊತೆ ಚರ್ಚೆ ಮಾಡುತ್ತೇನೆ. ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಅವರೇ ಸುಪ್ರೀಂ ಎಂದ ಅವರು, ಡಿ.ಕೆ ಶಿವಕುಮಾರ್ ಮತ್ತು ಈಶ್ವರಪ್ಪ ಅವರ ನಡುವೆ ವೈಯಕ್ತಿಕ ಜಗಳ ನಡೆದಿದೆ. ಅಧಿವೇಶನ ಕೂಡ ಇದೇ ವಿಚಾರಕ್ಕೆ ನಿಂತಿರೋದು. ವೈಯಕ್ತಿಕ ಟೀಕೆಗೆ ಗುರಿಯಾಗಿದೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ರು.

ಶಿವಮೊಗ್ಗ ಪ್ರಕರಣದಲ್ಲಿ ಕೂಡ ಹೀಗೆ ಮುಂದುವರಿದಿದೆ. JDS ಕೂಡ ಸದನ ನಡೆಸಲು ಧರಣಿ ಮಾಡಿದೆ. ಚರ್ಚೆ ಮಾಡಿದ್ರೆ ಈಶ್ವರಪ್ಪ ಮೇಲೆ ಆರೋಪ ಮಾಡಿರುವ ಬಗ್ಗೆ ಚರ್ಚೆ ಮಾಡಬಹುದಿತ್ತು. ಸ್ಪೀಕರ್ ಮತ್ತು ಯಡಿಯೂರಪ್ಪ ಅವರ ಜೊತೆ ನಾನೂ ಹೋಗಿ ಸಂಧಾನ ಮಾಡಿದೆ. ಆದ್ರೆ ಮೊಂಡಾಟ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅವರು ಕಿಡಿಕಾರಿದರು.

error: Content is protected !!