ಕೂಗು ನಿಮ್ಮದು ಧ್ವನಿ ನಮ್ಮದು

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಅಂಗನವಾಡಿ ಕಾರ್ಯಕರ್ತೆ

ತುಮಕೂರು: ಅಂಗನವಾಡಿ ಕಾರ್ಯಕರ್ತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಕುಣಿಗಲ್ ತಾಲೂಕಿನ ನಾಗೇಗೌಡನ ಪಾಳ್ಯ ಗ್ರಾಮದಲ್ಲಿ ಸಂಭವಿಸಿದೆ. ಗೀತಾ (29) ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಕಾರ್ಯಕರ್ತೆ. ಕಾರ್ಯಕರ್ತೆಯು ಹಿಂಬಡ್ತಿ ನೀಡಿದ ಕಾರಣಕ್ಕೆ ಬೇಸರ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಸಿದ್ದಾರೆ. ನಾಗೇನಹಳ್ಳಿ ಮಿನಿ ಅಂಗನವಾಡಿ ಕೇಂದ್ರದಿಂದ ಕಟ್ಟಿಗೇನಹಳ್ಳಿ ಕೇಂದ್ರಕ್ಕೆ ಮುಂಬಡ್ತಿ ನೀಡಿತ್ತು.

ಮುಂಬಡ್ತಿ ಇಂದ ಹಿಂಬಡ್ತಿ ಆದೇಶ ನೀಡಿದಕ್ಕೆ ಬೇಸರವಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗೀತಾ ಎಂಬುವರು ಮನೆಯಲ್ಲೇ ಸೀರೆಯಿಂದ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಮಯದಲ್ಲಿ ಕುಟುಂಬದವರೇ ಅವರು ನೇಣು ಹಾಕಿಕೊಳ್ಳುವುದನ್ನು ನೋಡಿ ನೇಣಿನ ಕುಣಿಕೆಯನ್ನ ಬಿಚ್ಚಿದ್ದಾರೆ.

ಗೀತಾ ಅವರು ಕಳೆದ 2 ದಿನಗಳಿಂದಲೂ ಊಟ ಮಾಡದೇ ಇದ್ರು. ಗೀತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್, ಸಿಡಿಪಿಒ ಅನುಷಾ, ಗಂಗಭೈರಮ್ಮ ವಿರುದ್ಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಈಗ ಅವರಿಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಯು ಅಮೃತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

error: Content is protected !!