ಕೂಗು ನಿಮ್ಮದು ಧ್ವನಿ ನಮ್ಮದು

ಹಿಜಾಬ್ ತೆಗೆದು ವಿದ್ಯಾರ್ಥಿನಿಯರು ಕ್ಲಾಸ್ ಗೆ ಹಾಜರ್: ಕೆ.ಎಸ್.ಆರ್.ಪಿ ಪೊಲೀಸರಿಂದ ಬಿಗಿ ಭದ್ರತೆ

ಚಿಕ್ಕಮಗಳೂರು: ಹಿಜಾಬ್ ಬೇಕೆ ಬೇಕೆಂದು ಬುಧವಾರ ಇಡೀ ದಿನ ಪ್ರತಿಭಟನೆ ನಡೆಸಿದ್ದ ನಗರದ ಎಂಇಎಸ್ ಕಾಲೇಜು ಬಳಿ ಗುರುವಾರ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ KSRP ತುಕಡಿ ಬೀಡು ಬಿಟ್ಟಿದೆ. ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದು ಯಾವುದೇ ಪ್ರತಿಭಟನೆಗೆ ಅವಕಾಶ ಕೊಡದೇ, ಯಾರಾದ್ರು ಪ್ರತಿಭಟನೆಗೆ ಮುಂದಾದ್ರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಈಗಾಗಲೇ ಜಿಲ್ಲಾಡಳಿತ ಶಾಲಾ ,ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿದೆ. ಬುಧವಾರ ಎಂಇಎಸ್ ಕಾಲೇಜಿನ ಆವರಣದಲ್ಲಿ ಒಂದು ಇಡೀ ದಿನ ಪ್ರತಿಭಟನೆ ನಡೆಸಿದ್ರು. ಕಾಲೇಜಿನ ಗೇಟ್ ಒಳಗೆ ವಿದ್ಯಾರ್ಥಿನಿಯರು, ಹೊರಗೆ ಪೋಷಕರು ಮತ್ತು ಸಮುದಾಯದ ಯುವಕರು ಪ್ರತಿಭಟನೆಯನ್ನು ನಡೆಸಿದ್ರು.
ತಹಶೀಲ್ದಾರ್, ಪೊಲೀಸರು, ಕಾಲೇಜು ಆಡಳಿತ ಮಂಡಳಿ ಮನವಿ ಮಾಡಿದ್ರು ವಿದ್ಯಾರ್ಥಿನಿಯರು ಕ್ಯಾರೇ ಅಂದಿರಲಿಲ್ಲ.

ನಂತರ ಧರ್ಮಗುರು ಮತ್ತು ಪಿಎಫ್‌ಐ ಸಂಘಟನೆ ಮುಖಂಡರು ಹೇಳಿದ ನಂತರ ಪ್ರತಿಭಟನೆ ಕೈಬಿಟ್ಟಿದ್ರು. ಹಾಗಾಗಿ ಇವತ್ತು ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲವೆಂದು ಕಾಲೇಜು ಬಳಿ KSRPಕೆ ತುಕಡಿಯನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿನಿಯರು ಕಾಲೇಜಿಗೆ ಬರಬಹುದು. ಆದ್ರೆ ಹಿಜಾಬ್ ತೆಗೆಯಬೇಕು. ಹಿಜಾಬ್ ತೆಗೆಯುವುದಿಲ್ಲ ಅಂದರೆ ಕಾಲೇಜಿನಲ್ಲಿ ಅವಕಾಶವಿಲ್ಲ. ಹಿಜಾಬ್ ಧರಿಸುತ್ತೇವೆ, ತೆಗೆಯಲ್ಲ ಎಂದರೆ ಅವರಿಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿ ಕೂತು ಹೋಗಬೇಕು. ಆದ್ರೆ ಅಲ್ಲಿ ಯಾವುದೇ ಪಾಠ ನಡೆಯುವುದಿಲ್ಲ.

ನಾಲ್ಕು ಗೋಡೆಗಳ ಮಧ್ಯೆ ಸುಮ್ಮನೆ ಕೂತು ಹೋಗಬೇಕು ಅಷ್ಟೆ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಲ್ಲಿ ಬಹುತೇಕರು ಶಿಕ್ಷಣ ಮುಖ್ಯ ಎಂದು ಹಿಜಾಬ್ ತೆಗೆದು ಬರುತ್ತಿದ್ದಾರೆ. ಕಾಲೇಜಿನ ಗೇಟಿನ ಮುಂದೆ ಪೊಲೀಸರು ಮತ್ತು ಆಡಳಿತ ಮಂಡಳಿಯವರು ಸಹ ಕಾವಲು ನಿಂತಿದ್ದಾರೆ.

error: Content is protected !!