ಬೆಂಗಳೂರು: ವಿಧಾನಸಭೆಯಲ್ಲಿ ಇವತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ನಡುವೆ ಮಾತಿನ ಚಕಮಕಿ ನಡೆದಿದೆ. ಈಶ್ವರಪ್ಪ ರಾಷ್ಟ್ರದ್ರೋಹಿ ಎಂದು ಡಿಕೆಶಿ ಕೂಗುತ್ತಿದ್ದಂತೆ ಈಶ್ವರಪ್ಪ ನಾನಲ್ಲ ರಾಷ್ಟ್ರದ್ರೋಹಿ ನೀನು ಎಂದು ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆಯಲ್ಲಿ ಇವತ್ತು ಈಶ್ವರಪ್ಪ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರು ನಾಯಕರು ಮಾತಿನ ಜಗಳಕ್ಕೆ ಇಳಿದ ಪ್ರಸಂಗ ನಡೆಯಿತು.
ಕೆಲ ದಿನಗಳ ಹಿಂದೆ ಈಶ್ವರಪ್ಪ ರಾಷ್ಟ್ರಧ್ವಜದ ಬಗ್ಗೆ ನೀಡಿದ ಹೇಳಿಕೆ ಇವತ್ತು ವಿಧಾನ ಸಭೆಯಲ್ಲಿ ಕೊಲಾಹಲ ಸೃಷ್ಟಿಸಿತು. ಈಶ್ವರಪ್ಪ ಮಾತಿನ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಧ್ವನಿ ಎತ್ತುತ್ತಿದ್ದಂತೆ, ಡಿ.ಕೆ ಶಿವಕುಮಾರ್, ಈಶ್ವರಪ್ಪ ವಿರುದ್ಧ ವಾಕ್ಸಮರ ನಡೆಸಿದ್ರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈಶ್ವರಪ್ಪ ಹೇಳಿಕೆಯ ಬಗ್ಗೆ ಅವರ ಅಭಿಪ್ರಾಯ ಕೇಳುತ್ತೇನೆ ಎಂದಾಗ, ದೇಶದ್ರೋಹ ಮಾಡಿವರೊಂದಿಗೆ ಏನು ಉತ್ತರ ಕೇಳುತ್ತೀರಿ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಮಾತಿಗೆ ತೀವ್ರ ಸಿಟ್ಟಿಗೆದ್ದ ಈಶ್ವರಪ್ಪ ರಾಷ್ಟ್ರ ದ್ರೋಹಿ ಅವನು, ಜೈಲಿಗೆ ಹೋಗಿ ಬಂದವನು ನನಗೇನು ಹೇಳೋದು, ಬೇಲ್‍ನಲ್ಲಿ ಇದ್ದೀಯಾ, ನೀನು ರಾಷ್ಟ್ರ ದ್ರೋಹಿ ನೀನು ನನಗೆ ಹೇಳಬೇಡ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕೆಂಡಕಾರಿದರು. ಸದನದಲ್ಲಿ ಕೆಲಕಾಲ ಏಕವಚನದಲ್ಲಿ ಇಬ್ಬರೂ ಕೈ, ಕೈ ತೋರಿಸಿಕೊಂಡು ಕಿರಿಚಾಡಿದರು. ಡಿ.ಕೆ.ಶಿವಕುಮಾರ್ ಹಾಗೂ ಕೆ.ಎಸ್ ಈಶ್ವರಪ್ಪ ಕೂಗಾಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಸ್ಪೀಕರ್, ನೀವೆಲ್ಲ ಹಿರಿಯ ಸದಸ್ಯರು, ಏಕೆ ಹೀಗೆ ಆಡುತ್ತಿದ್ದಿರಿ?. ನನಗೆ ಮನವರಿಕೆ ಆಗಬೇಕಲ್ಲವಾ? ನಿಮ್ಮನ್ನು ನೋಡಿದರೆ ಏನ್ ಮನವರಿಕೆ ಆಗುತ್ತೆ? ರೀ ಶಿವಕುಮಾರ್ ನೀವು ಹೇಗೆ ನಡೆದುಕೊಳ್ತಿದ್ದೀರಿ? ನೀವು ಒಂದು ಪಕ್ಷದ ಅಧ್ಯಕ್ಷರು ಎಂದು ಗರಂ ಆದ್ರು