ಹಾಸನ: ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ. ಪ್ರಧಾನ ಮಂತ್ರಿ ಮೋದಿಯವರ ಬೇಟಿ ಬಚಾವ್ ಬೇಟಿ ಪಡಾವ್ ಘೋಷಣೆಯಂತೆ ಮಕ್ಕಳಿಗೆ ಶಿಕ್ಷಣ ಕೊಡುವುದು ಮತ್ತು ಹೆಣ್ಣು ಮಕ್ಕಳ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ಹಾಸನದ ಸಂಸದ D.K ಸುರೇಶ್ ಹೇಳಿದ್ರು. ಸಂವಿಧಾನವನ್ನು ಉಳಿಸಬೇಕಾಗಿರುವುದು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ತೆಗೆದುಕೊಂಡಿರುವ ಎಲ್ಲಾ ಪ್ರತಿನಿಧಿಗಳ ಜವಾಬ್ದಾರಿ.
ಹಿಜಾಬ್ ವಿಚಾರ ರಾಜಕೀಯ ಮಾಡುತ್ತಿರುವುದೇ ಬಿಜೆಪಿಯವರು. ಇದು ಪ್ರಾರಂಭವಾಗಿರುವುದು ಬಿಜೆಪಿ ಅಂಗ ಸಂಸ್ಥೆಗಳಿಂದ ಎಂದ್ರು. ಹಿಜಾಬ್ ವಿವಾದ ಏಕಾಏಕಿ ಬಂದಿಲ್ಲ. ಕೇಸರಿ ವಿವಾದ ಸೃಷ್ಟಿ ಮಾಡಿರುವುದು ಸರ್ಕಾರವೇ ಹೊರತು ಬೇರೆ ಯಾರೂ ಅಲ್ಲ. ಫೆಬ್ರವರಿ ಐದರ ವರೆಗೆ ಒಂದು ಆದೇಶವಿತ್ತು. ತದನಂತರ ಆದೇಶ ಬದಲಾವಣೆಯಾಗಿದ್ದರಿಂದ ರಾಜ್ಯ,ರಾಷ್ಟ್ರದಲ್ಲಿ ಗೊಂದಲಗಳು ಸೃಷ್ಟಿಯಾಗಿವೆ.
ಈ ಗೊಂದಲವನ್ನು ಸರಿಪಡಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು D.K ಸುರೇಶ್ ಹೇಳಿದರು. ಕೇಸರಿ ಧ್ವಜವನ್ನು ರಾಷ್ಟ್ರ ಧ್ವಜವನ್ನಾಗಿ ಮಾಡಿ ಕೆಂಪುಕೋಟೆ ಮೇಲೆ ಹಾರಿಸಬೇಕೆಂದು ಒಬ್ಬ ಹಿರಿಯ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಅವರ ಮೇಲೆ ಕೇಸ್ ದಾಖಲಿಸಬೇಕು. ಅವರನ್ನು ಸಂಪುಟದಿಂದ ಕೈಬಿಡಬೇಕು. ಅದನ್ನು ಬಿಟ್ಟು ಬೇರೆ ಎಲ್ಲಾ ವಿಚಾರಗಳನ್ನು ಮಾತನಾಡುವುದು ಎಷ್ಟು ಸರಿ ಎಂದು ಡಿ.ಕೆ ಸುರೇಶ್ ಪ್ರಶ್ನೆ ಮಾಡಿದ್ದಾರೆ.