ಕೂಗು ನಿಮ್ಮದು ಧ್ವನಿ ನಮ್ಮದು

ತೀರದ ತೀಟೆಗೆ ಐವರ ಕೊಲೆ: ಹಂತಕಿ ಪೊಲೀಸರ ಮುಂದೆ ಕಕ್ಕಿದ್ದೇನು..!?

ಮಂಡ್ಯ: ಒಂದೇ ಕುಟುಂಬದ ಐವರ ಕೊಲೆ ಪ್ರಕರಣ ಮಂಡ್ಯ ಜಿಲ್ಲೆಯನ್ನೆ ಬೆಚ್ಚಿ ಬೀಳುವಂತೆ ಮಾಡಿತ್ತು. ಇದೀಗ ಆ ಗಂಭೀರ ಪ್ರಕರಣವನ್ನ ಪೊಲೀಸರು ಎರಡನೇ ದಿನದಲ್ಲಿ ಭೇದಿಸಲು ಯಶಸ್ವಿಯಾಗಿದ್ದು, ಮೃತ ಮಹಿಳೆಯ ಅಕ್ಕನೆ ಕೊಲೆ ಪಾತಕಿಯಾಗಿದ್ದಾಳೆ. ಇನ್ನು ಕೊಲೆ ಮಾಡಿರುವ ಕಾರಣ ಕೇಳಿ ಪೊಲೀಸರೆ ಒಂದು ಕ್ಷಣ ದಂಗಾಗಿದ್ದಾರೆ.

ಫೆಬ್ರುವರಿ 5 ನೇ ತಾರೀಖು ರಾತ್ರಿ ಮಂಡ್ಯದ ಕೆ.ಆರ್.ಎಸ್ ಗ್ರಾಮದ ಬಜಾರ್ ಲೈನ್ ನಲ್ಲಿ ನಡೆಯಬಾರದ ಘಟನೆ ನಡೆದು ಹೋಗಿತ್ತು. ಗಂಗಾರಾಮ್ ಎಂಬುವವರ ಕುಟುಂಬದ ನಾಲ್ವರು ಮಕ್ಕಳು ಸೇರಿದಂತೆ ಐವರನ್ನ ಭೀಕರವಾಗಿ ಹತ್ಯೆಮಾಡಲಾಗಿತ್ತು. ಘಟನೆ ಫೆ.6 ಬೆಳಿಗ್ಗೆ ಬೆಳಕಿಗೆ ಬಂದಿತ್ತು. ಘಟನೆ ತಿಳಿಯುತ್ತಿದ್ದಂತೆ ನೂರಾರು ಜನರು ಮನೆ ಬಳಿ ಜಮಾಯಿಸಿದ್ರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದೀಗ ಎರಡೇ ದಿನಕ್ಕೆ ಈ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು ಕೊಲೆ ಪಾತಕಿಯನ್ನ ಬಂಧಿಸಿದ್ದಾರೆ. ಆ ವಿಚಾರ ತಿಳಿದುಕೊಳ್ಳು ಮುನ್ನ ಘಟನೆ ನಡೆದ ದಿನ ಗೋಳಾಡಿದ್ದ ಈ ಮಹಿಳೆಯೊಬ್ಬಳ ದೃಶ್ಯವನ್ನೊಮ್ಮೆ ಕಣ್ತುಂಬಿಕೊಳ್ಳಿ.

ಆರೋಪಿ ಲಕ್ಷ್ಮೀ

ಹೀಗೆ ಅಮಾಯಕಿಯಂತೆ ಕಣ್ಣೀರಿಟ್ಟು ಗೋಳಾಡ್ತಿರುವ ಈ ಮಹಿಳೆ ಲಕ್ಷ್ಮೀ. ಸಂಬಂಧದಲ್ಲಿ ಮೃತ ಲಕ್ಷ್ಮಿಯ ಅಕ್ಕನೆ ಆಗಿದ್ದಾಳೆ. ಆದ್ರೆ ಮೃತ ಲಕ್ಷ್ಮೀ ಪತಿ ಗಂಗಾರಾಮ್ ಹಾಗು ಕೊಲೆಗಾತಿ ಲಕ್ಷ್ಮಿ ನಡುವೆ ಬಾಲ್ಯದಿಂದಲೇ ಸ್ನೇಹವಿದ್ದು, ಅಕ್ರಮ ಸಂಬಂಧವಿತ್ತು. ಆದ್ರೆ ಕೆಲ ತಿಂಗಳ ಹಿಂದೆ ಅಕ್ರಮ ಸಂಬಂಧವನ್ನ ಕಡಿದುಕೊಂಡಿದ್ದ ಗಂಗಾರಾಮ್ ತನ್ನ ಹೆಂಡತಿ ಹಾಗು ಮಕ್ಕಳೊಂದಿಗೆ ನೆಮ್ಮದಿ ಜೀವನದಲ್ಲಿ ಮುಳುಗಿದ್ದ. ಆದ್ರೆ ತನ್ನ ಪ್ರಿಯಕರ ದೂರವಾದದನ್ನ ಸಹಿಸದ ಕೊಲೆಗಾತಿ ಲಕ್ಷ್ಮೀ, ತನ್ನ ಮೋಹಕ್ಕೆ ಅಡ್ಡಿಯಾಗಿದ್ದ ಗಂಗಾರಾಮ್ ನ ಹೆಂಡತಿಯನ್ನೆ ತಂಗಿ ಎಂಬುದನ್ನೆ ಮರೆತು ಹತ್ಯೆಗೆ ಸಂಚು ರೂಪಿಸಿದ್ದಾಳೆ. ಅದರಂತೆ ಪ್ರಿಯಕರ ಗಂಗಾರಾಮ್ ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನ ಹೊರರಾಜ್ಯದಲ್ಲಿ ಮಾರಾಟಕ್ಕೆ ಹೋಗುವುದನ್ನೆ ಕಾದು ಕುಳಿತಿದ್ದ ಲಕ್ಷ್ಮೀ ಫೆ.5 ರಂದು ಮೈಸೂರಿನ ಬೆಲವತ್ತ ಗ್ರಾಮದಿಂದ ಕೆ.ಆರ್.ಎಸ್ ಗೆ ಬಸ್ ನಲ್ಲಿ ಆಗಮಿಸಿದ್ದಾಳೆ. ಮೃತ ಲಕ್ಷ್ಮೀ ಮನೆಯಲ್ಲೆ ಇದ್ದು ಒಟ್ಟಿಗೆ ಊಟ ಮಾಡಿ ಮಲಗಿದ್ದಾಳೆ. ಎಲ್ಲರೂ ನಿದ್ರೆಗೆ ಜಾರುತ್ತಿದ್ದಂತೆ ರಾತ್ರಿ 11 ರಿಂದ 12 ಗಂಟೆ ಸಮಯದಲ್ಲಿ ಮೊದಲೆ ತಂದಿದ್ದ ಮಚ್ಚು‌ ಹಾಗು ಸುತ್ತಿಗೆಯಿಂದ ಗಂಗಾರಾಮ್ ಪತ್ನಿ ಲಕ್ಷ್ಮೀ ಮೇಲೆ ಹಲ್ಲೆ ನಡಸಿದ್ದಾಳೆ. ಬಳಿಕ ದಿಂಬಿನಿಂದ ಉಸಿರುಕಟ್ಟಿಸಿ ಸಾಯಿಸಿದ್ದಾಳೆ. ನಂತರ ನಿದ್ದೆಯಿಂದ ಎದ್ದಿದ್ದ ಮಕ್ಕಳಾದ ಕುನಾಲ್, ರಾಜ್, ಕೋಮಲ್ ಹಾಗೂ ಗಂಗಾರಾಮ್ ನ ಸಹೋದರನ ಮಗ ಗೋವಿಂದನನ್ನ ಮಚ್ಚು ಹಾಗೂ ಹರಿತವಾದ ಸುತ್ತಿಗೆಯಿಂದ ಹೊಡೆದು ಅಮಾನುಷವಾಗಿ ಹತ್ಯೆ ಮಾಡಿ ಸ್ವಲ್ಪವೂ ಸುಳಿವು ಸಿಗದಂತೆ ಕೆಲಸ ಮುಗಿಸಿದ್ದಾಳೆ.

ಇನ್ನು ಕೊಲೆ ಮಾಡಿದ ಈ ಮಾಟಗಾತಿ ಬೆಳಗಿನ‌ ಜಾವ 4 ಗಂಟೆಗೆ ಕೆ.ಆರ್.ಎಸ್ ನಿಂದ ತನ್ನೂರು ಮೈಸೂರಿನ ಬೆಲವತ್ತಗೆ ಬಸ್ ನಲ್ಲೆ ತೆರಳಿದ್ದಾಳೆ. ಬೆಳಿಗ್ಗೆ ಮತ್ತೆ ಕೆ.ಆರ್.ಎಸ್ ಗೆ ಆಗಮಿಸಿ ಯಾರಿಗು ಅನುಮಾನ ಬಾರದಂತೆ ಎಲ್ಲರ ಮುಂದೆ ಕಣ್ಣೀರಿಟ್ಟು, ಗೋಳಾಡಿ ನಾಟಕವಾಡಿದ್ದಾಳೆ. ಬಳಿಕ ಸಂಬಂಧಿಕರ ಮಾಹಿತಿ ಹಾಗೂ ತಾಂತ್ರಿಕ ಸಾಕ್ಷಿಗಳಿಂದ ಪ್ರಕರಣ ತನಿಖೆ ನಡೆಸಿದ್ದ ಪೊಲೀಸರ ಮುಂದೆ ಗಂಗಾರಾಮ್ ಸ್ನೇಹಕ್ಕೆ ಮೃತ ಲಕ್ಷ್ಮಿ ಅಡ್ಡಿಯಾಗಿದ್ದಳು. ಅದಕ್ಕೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೇ ಬೆಲವತ್ತದಿಂದ ಕೆ.ಆರ್.ಎಸ್ ಗೆ ಬರುವಾಗ ಚಿಕನ್ ಅಂಗಡಿಯೊಂದರಲ್ಲಿ ಕೆಲಸವಿದೆ ಎಂದು ಮಚ್ಚನ್ನು ಇಸ್ಕೊಂಡು ಬಂದಿದ್ದಾಳೆ. ಅದೇ ಮಚ್ಚು ಹಾಗು ಸುತ್ತಿಗೆಯಿಂದ ಕೊಲೆಗೈದಿದ್ದಾಳೆ. ನಂತರ ಮಚ್ಚನ್ನು ವಾಪಸ್ಸು ಅಂಗಡಿಗೆ ಕೊಟ್ಟಿದ್ದಾಳೆ..

ಒಟ್ಟಾರೆ ತನ್ನ ತೀರದ ತೀಟೆಗಾಗಿ ಮಕ್ಕಳು, ಮಹಿಳೆ ಸೇರಿದಂತೆ ಐವರನ್ನು ಹತ್ಯೆಮಾಡಿದ ಕೊಲೆಗಾತಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಎಲ್ಲ ಅಭಿಪ್ರಾಯವಾಗಿದೆ.

error: Content is protected !!