ಕೂಗು ನಿಮ್ಮದು ಧ್ವನಿ ನಮ್ಮದು

ಮಾಸ್ಕ್ ಹಾಕದ್ದಕ್ಕೆ ದಂಡ ಕಟ್ಟುವಂತೆ ಹೇಳಿದ ASI ಮೇಲೆ ಪುಡಿರೌಡಿಯಿಂದ ಹಲ್ಲೆ

ಮಂಡ್ಯ: ಮಂಡ್ಯದಲ್ಲಿ ದಿನೇದಿನೇ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದೆ. ಪುಂಡರು ಕರ್ತವ್ಯನಿರತ ಪೊಲೀಸರ‌ ಮೇಲೆ ಹಲ್ಲೆಗೆ ಮುಂದಾಗ್ತಿದಾರೆ. ಮಾಸ್ಕ್, ಹೆಲ್ಮೆಟ್ ತಪಾಸಣೆ ವೇಳೆ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಳ್ಳುವ ಇವರಿಗೆ ಮೂಗುದಾಣ ಹಾಕಬೇಕಾದ ಅವಶ್ಯಕತೆ ಇದೆ.

ಪೊಲೀಸರ ಮೇಲೆ ಪದೇ ಪದೇ ಇಂತಹ ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿ ಕರ್ತವ್ಯನಿರತ ASI ಮೇಲೆ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯಿಂದ ಹಲ್ಲೆ ಯತ್ನ ನಡೆದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಪಾಂಡವಪುರ ಠಾಣೆಯ ASI ಮಹೇಶ್ ಪ್ರಭು ಎಂಬುವರ ಮೇಲೆ ಹಲ್ಲೆ ಈ ಹಲ್ಲೆ ಯತ್ನ ನಡೆದಿದೆ.

ಮಾಸ್ಕ್ ಧರಿಸದ ಜನರಿಂದ ದಂಡ ವಸೂಲಿ ಮಾಡ್ತಿದ್ದ ವೇಳೆ ಈ ಕೃತ್ಯ ನಡೆದಿದ್ದು, ಶಾಂತಿ ನಗರದ ನಿವಾಸಿ ನಾಗೇಶ್ ಎಂಬುವನಿಂದ ASI ಮೇಲೆ ಹಲ್ಲೆ‌‌ ನಡೆದಿದೆ. ಪಟ್ಟಣದ ರಾಜಾ ಮೆಡಿಕಲ್‌ ಬಳಿ ಮಾಸ್ಕ್ ಕಾರ್ಯಚರಣೆ ನಡೆಸ್ತಿದ್ದ ವೇಳೆ ಆರೋಪಿ ನಾಗೇಶ್ ಮಾಸ್ಕ್ ಧರಿಸದೆ ಬಂದಿದ್ದರಿಂದ ದಂಡ ಕಟ್ಟುವಂತೆ ಪೊಲೀಸರು ಸೂಚಿಸಿದ್ದಾರೆ. ಆಗ ದಂಡ ವಿಧಿಸಲು ಮುಂದಾದ ASI ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ‌‌ ನಡೆಸಿದ್ದಾನೆ.

ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಆರೋಪಿ ವಿರುದ್ದ ಪಾಂಡವಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!