ಬೆಳಗಾವಿ: ಕೊಣ್ಣೂರು ಕಬ್ಬಿನ ಗದ್ದೆ ಮರ್ಡರ್ ಪ್ರಕರಣವನ್ನು ಭೇದಿಸುವಲ್ಲಿ ಗೋಕಾಕ ಗ್ರಾಮೀಣ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳಷ್ಟೇ ಕೊಣ್ಣೂರು ಪಟ್ಟಣದ ಹಣಮಂತ ಭೀಮಶಿ ಜತ್ನಿ (36) ಎಂಬಾತನನ್ನು ಕಬ್ಬಿನ ಗದ್ದೆಯಲ್ಲಿ ಕೊಲೆಗೈದು ಹಂತಕರು ಪರಾರಿಯಾಗಿದ್ರು. ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದ ಮೇರೆಗೆ ಪ್ರಕರಣದ ಬೆನ್ನಬಿದ್ದ ಗೋಕಾಕ ಇನ್ಸ್ಪೆಕ್ಟರ್ ಗೋಪಾಲ್ ರಾಠೋಡ ಆಂಡ್ ಟೀಂ ಕೊನೆಗೂ ಹಂತಕರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದ್ದು, ಮೂವರು ಹಂತಕರನ್ನ ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಕೊಣ್ಣೂರು ಪಟ್ಟಣದ ಕೆಂಪಣ್ಣಾ ವಣ್ಣೂರೆ, ಪ್ರಕಾಶ ಗುರವ, ರಮೇಶ ವಾಘಮೋಡೆ ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಸುಪರ್ದಿಗೆ ನೀಡಲಾಗಿದೆ.