ಕೂಗು ನಿಮ್ಮದು ಧ್ವನಿ ನಮ್ಮದು

ನಿಯಮ ಗಾಳಿಗೆ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕ ಆನಂದ್ ಮಾಮನಿ: ಪೊಲೀಸ್ ಅಧಿಕಾರಿಗಳಿಂದಲೂ ಕೋವಿಡ್ ರೂಲ್ಸ್ ಬ್ರೇಕ್

ಬೆಳಗಾವಿ: ನಿಯಮ ತರುವವರಿಂದಲೇ ನಿಯಮ ಉಲ್ಲಂಘನೆ. ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಹುಟ್ಟು ಹಬ್ಬ ಹಿನ್ನೆಲೆ ಕೊವಿಡ್ ನಿಯಮ ಗಾಳಿಗೆ ತೂರಿ ಹುಟ್ಟು ಹಬ್ಬ ಆಚರಣೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣ ಶಾಸಕ, ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿಯವರ ಮನೆಯಲ್ಲಿ ಶುಭಾಶಯಗಳ ಮಾಹಾಪೂರ ಹರಿದು ಬರ್ತಿದೆ. ಶಾಸಕರ ಹುಟ್ಟು ಹಬ್ಬದ ವೇಳೆ ಕೊವಿಡ್ ನಿಯಮಗಳನ್ನು ತಾವೂ ಪಾಲಿಸಿ, ಜಾರಿಗೊಳಿಸಬೇಕಾದ ಸ್ಥಳಿಯ ಪೊಲೀಸ್ ಅಧಿಕಾರಿಗಳಿಂದಲೇ ಕೊವಿಡ್ ನಿಯಮ ಉಲ್ಲಂಘನೆಯಾಗಿದೆ. ಸವದತ್ತಿ ಸಿಪಿಐ ಆದಿಯಾಗಿ ಹಲವು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಶಾಸಕರಿಂದ ಕೇಕ್ ಕಟ್ ಮಾಡಿಸಿ, ಹೂಗುಚ್ಚ ನೀಡಿ ಶುಭಾಶಯ ಕೊರಿದ್ದಾರೆ.

 

ಇನ್ನು ಶಾಸಕರಾಗಿ, ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿ ನಿಯಮ ಗಾಳಿಗೆ ತೂರಿ ತಮ್ಮ ಹುಟ್ಟು ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಶಾಸಕರಿಗೆ ಅಭಿಮಾನಿಗಳು, ಬೆಂಬಲಿಗರಿಂದ ಶುಭಾಶಯಗಳ ಮಹಾಪುರ ಹರಿದು ಬಂದಿದ್ದು, ಕೋವಿಡ್ ರೂಲ್ಸ್ ಗಾಳಿಗೆ ತೂರಿದ ಶಾಸಕರು, ಪೊಲೀಸ್ ಅಧಿಕಾರಿಗಳು ಹಾಗೂ ಬೆಂಬಲಿಗರ ವಿರುದ್ದ ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.

ಹುಟ್ಟು ಹಬ್ಬ ಆಚರಣೆ ವೇಳೆ ಮಾಸ್ಕ್, ಸಾಮಾಜಿಕ ಅಂತರ ಇಲ್ಲದೇ ಗುಂಪು ಗುಂಪಾಗಿ ನಿಂತು ಪೋಟೊಗೆ ಪೊಸ್ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

error: Content is protected !!