ಕೂಗು ನಿಮ್ಮದು ಧ್ವನಿ ನಮ್ಮದು

ಮಠದ ಆನೆ ಅಪಹರಣ: ಅರಣ್ಯ ಇಲಾಖೆ ಸಿಬ್ಬಂದಿ ಕೈವಾಡ ಶಂಕೆ

ತುಮಕೂರು: ಮನುಷ್ಯರನ್ನು ಅಪಹರಣ ಮಾಡಿದ್ದು ನೋಡಿದಿವಿ. ಚಿಕ್ಕಪುಟ್ಟ ವಸ್ತುಗಳನ್ನು ಕಳ್ಳತನ ಮಾಡಿದ್ದು ಕಂಡಿದಿವಿ. ಆದ್ರೆ ಆನೆಯನ್ನೇ ಅಪಹರಣ ಮಾಡುತ್ತಾರೆ ಎಂದರೆ ನಂಬೋಕಾಗುತ್ತಾ.? ಹೌದು, ತುಮಕೂರು ನಗರದ ಹೊರಪೇಟೆಯಲ್ಲಿರುವ ಕರಿಬಸವಸ್ವಾಮಿ ಮಠದ ಆನೆಯನ್ನು ನಿನ್ನೆ ಅಪಹರಣ ಮಾಡಲಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿಕೊಂಡು ಆನೆಗೆ ಬನ್ನೇರಘಟ್ಟದಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿ ಲಾರಿಯಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ. ದಾಬಸ್ ಪೇಟೆ ಬಳಿ ಮಠದ ಆನೆಯ ಮಾವುತರನ್ನು ಹಲ್ಲೆ ಮಾಡಿ ಅವರನ್ನು ಕೆಳಗಿಳಿಸಿ ಆನೆಯನ್ನು ಅಪಹರಣ ಮಾಡಿದ್ದಾರೆ.

ಅಪಹರಣವಾಗಿದ್ದ ಹೆಣ್ಣಾನೆ ಲಕ್ಷ್ಮೀ

ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗುವ ಬದಲು ಕುಣಿಗಲ್ ನ ಹಳ್ಳಿಯೊಂದರಲ್ಲಿ ಆನೆಯನ್ನು ಬಚ್ಚಿಡಲಾಗಿತ್ತು. ಈ ವೇಳೆ ಆನೆಗೂ ಜೆಸಿಬಿಯಿಂದ ಹಲ್ಲೆ ಮಾಡಲಾಗಿತ್ತು ಅನ್ನೋದು ಮಠದ ಸಿಬ್ಬಂದಿಗಳ ಆರೋಪ. ಕಳೆದ 29 ವರ್ಷಗಳಿಂದ ಕರಿಬಸವಸ್ವಾಮಿ ಮಠದಲ್ಲಿ ಈ ಹೆಣ್ಣಾನೆ ಇದೆ. ಕಾನೂನು ಬದ್ದವಾಗಿ ಈ ಆನೆಯನ್ನು ಮಠದಲ್ಲಿ ಬೆಳೆಸಿಕೊಂಡು ಬರಲಾಗಿದೆ. ಜಾತ್ರೆ ಉತ್ಸವದ ಸಂದರ್ಭದಲ್ಲಿ ಸಂಪ್ರದಾಯದಂತೆ ಆನೆ ಬಳಕೆ ಆಗುತ್ತದೆ. ಯಾರಿಗೂ ಉಪದ್ರವ ಕೊಡದ ಆನೆ ಸೌಮ್ಯ ಸ್ವಭಾವದ್ದು. ಇಂಥಹ ಆನೆಗಳನ್ನು ಸರ್ಕಸ್ ಕಂಪನಿಗಳಲ್ಲಿ ಬಳಸಿಕೊಂಡರೆ ಒಳ್ಳೆ ಪರ್‍ಪಾರ್‍ಮೆನ್ಸ್ ಕೊಡುತ್ತದೆಯಂತೆ. ಹಾಗಾಗಿ ಅರಣ್ಯ ಅಧಿಕಾರಿಗಳು ಗುಜರಾತಿನ ಸರ್ಕಸ್ ಕಂಪನಿಯ ಆಮೀಷಕ್ಕೆ ಒಳಗಾಗಿ ಅವರೊಂದಿಗೆ ಸೇರಿಕೊಂಡು ಆನೆಯನ್ನು ಕದ್ದೊಯ್ದಿದ್ದಾರೆ ಅನ್ನೋದು ಆರೋಪ.

ಆನೆ ಅಪಹರಣಕ್ಕೆ ಬಳಸಿದ ಲಾರಿ

ಕಳೆದ ತಿಂಗಳು ಆನೆಯ ಆರೋಗ್ಯ ಪರೀಕ್ಷೆ ನಡೆಸಿ ಬಂದಿದ್ವಿ. ಆದರೂ ಇದ್ದಕಿದ್ದ ಹಾಗೆ ಅರಣ್ಯ ಇಲಾಖೆ ಆಧಿಕಾರಿಗಳು ಬಂದು ಆನೆ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ ಆಪರೇಷನ್ ಮಾಡಬೇಕು ಎಂದು ಸರ್ಕಸ್ ಕಂಪನಿ ಲಾರಿ ಮತ್ತು ಅವರ 8 ಜನ ಮಾವುತರನ್ನು ಕರೆತಂದು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅರ್ಧದಾರಿಯಲ್ಲಿ ಮಾರ್ಗ ಬದಲಿಸಿ ಅಪಹರಿಸಿದ್ದಾರೆ. ಅಪಹರಿಸಿದ ಆನೆ ಲಕ್ಷ್ಮೀ ನಿನ್ನೆ ಸಂಜೆ ವೇಳೆ ಕುಣಿಗಲ್ ತಾಲೂಕಿನ ಹಳ್ಳಿಯೊಂದರಲ್ಲಿ ಪತ್ತೆಯಾಗಿದೆ. ಮಠದವರು ಲಾರಿ ಮೂಲಕ ಆನೆಯನ್ನು ವಾಪಸ್ ಮನೆಗೆ ಕರೆತಂದಿದ್ದಾರೆ.

error: Content is protected !!