ಶಿವಮೊಗ್ಗ: ಹತ್ತು ರೂಪಾಯಿ ಹಣ ನೀಡಿ ಖರೀದಿ ಮಾಡಿದ ಕೋಳಿ ಮರಿಗೆ ಬರೋಬ್ಬರಿ 52 ರೂಪಾಯಿ ಕೊಟ್ಟು ಅರ್ಧ ಟಿಕೆಟ್ ಪಡೆದ ಘಟನೆ ಹೊಸನಗರದಿಂದ ಶಿರೂರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ನಡೆದಿದೆ.
ಶನಿವಾರ ಅಲೆಮಾರಿ ಕುಟುಂಬವೊಂದು ಹೊಸನಗರದಿಂದ ಶಿರೂರಿಗೆ ಪ್ರಯಾಣ ಬೆಳೆಸಿತ್ತು. ಈ ಕುಟುಂಬ ಶಿರಸಿಯಲ್ಲಿ 10 ರೂಪಾಯಿ ಕೊಟ್ಟು ಕೋಳಿ ಮರಿಯೊಂದನ್ನು ಖರೀದಿಸಿದೆ.
ನಂತರ ಖಾಸಗಿ ಬಸ್‌ನಲ್ಲಿ ಹೊಸನಗರಕ್ಕೆ ಬಂದು ಅಲ್ಲಿಂದ ಶಿರೂರಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಹತ್ತಿದೆ. ಈ ಸಂದರ್ಭದಲ್ಲಿ ಕಂಡಕ್ಟರ್ ಸರ್ಕಾರಿ ಬಸ್ಸಿನ ನಿಯಮದ ಪ್ರಕಾರ ಕೋಳಿ ಮರಿಗೂ ಟಿಕೆಟ್ ಮಾಡಿಸಬೇಕು ಎಂದಿದ್ದಾರೆ. ಇದರಿಂದ ಕಂಗಾಲಾದ ಕುಟುಂಬ ಬೇರೆ ದಾರಿ ಕಾಣದೆ ಕೋಳಿ ಮರಿಗೂ ಅರ್ಧ ಟಿಕೆಟ್ ಪಡೆದು ಪ್ರಯಾಣಿಸಿದೆ.