ಬೆಳಗಾವಿ,: ಇಲ್ಲಿಯ ಶಾಂತಾಯಿ ವೃದ್ದಾಶ್ರಮದಲ್ಲಿ ಉದ್ಯಮಿ ವಿಜಯ ಪಾಟೀಲ ಅವರ ತಾಯಿ ಶಾಂತಾಯಿ ಭರಮಾ ಪಾಟೀಲ ಅವರ ಜನ್ಮ ದಿನವನ್ನು ಶನಿವಾರ ಸಂಜೆ ಆಚರಿಸಲಾಯಿತು.
ವೃದ್ದಾಶ್ರಮದಲ್ಲಿರುವ ಹಿರಿಯರ ಮಧ್ಯೆ ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಯಮಿ ಮದನ್ ಕುಮಾರ ಭೈರಪ್ಪನವರ್ ಅವರು ವೃದ್ದಾಶ್ರಮಕ್ಕೆ 11 ಸಾವಿರ ರೂ.ಗಳ ಆರ್ಥಿಕ ಸಹಾಯ ನೀಡಿದರು.
ಶೃತಿ ಕನಸ್ಟ್ರಕ್ಷನ್ ಪ್ರೊಪರೈಟರ್ ಮದನ್ ಕುಮಾರ ಭೈರಪ್ಪನವರ್, ವಿಜಯ ಮೋರೆ, ನಾಗೇಶ್ ಚೌಗುಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆಶ್ರಮವಾಸಿಗಳಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು.