ಕೂಗು ನಿಮ್ಮದು ಧ್ವನಿ ನಮ್ಮದು

ರಸ್ತೆ ಪಕ್ಕ ಖುಲ್ಲಂಖುಲ್ಲಾ ಅಂದರ್ ಬಾಹರ್: ಘಟಪ್ರಭಾ ಪೊಲೀಸರ ಅಂಧಾ ದರ್ಬಾರ್

ಬೆಳಗಾವಿ: ಇತ್ತಿಚಿಗೆ ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಅಪರಾಧ ಪ್ರಕರಣಗಳು ನಡಿತಿದ್ರು ಪೊಲೀಸರು ಮಾತ್ರ ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶನ ಮಾಡ್ತಿದಾರೆ. ಗಾಂಜಾ ಸೇವನೆ, ಮಟ್ಕಾ ಮತ್ತು ಇಸ್ಪಿಟ್ ನಂತ ದುಶ್ಚಟಗಳಿಗೆ ದಾಸರಾಗುತ್ತಿರೋ ಯುವಕರು ಈ ಭಾಗದಲ್ಲಿ ರಾತ್ರಿ 12 ಗಂಟೆಯಾದ್ರು ಮನೆಗಳಿಗೆ ತೆರಳದೇ ರಾಜಾರೋಷವಾಗಿ ತಿರುಗಾಡುತತಿದ್ರು ಯಾವೊಬ್ಬ ಪೊಲೀಸಪ್ಪ ಕೂಡ ಅವರನ್ನು ಪ್ರಶ್ನಿಸುವ ಗೋಜಿಗೆ ಹೋಗೊದೇ ಇಲ್ಲ. ಅಷ್ಟೇ ಅಲ್ಲಾ ಇತ್ತೀಚೆಗಷ್ಟೆ ಗಾಂಜಾ ಮತ್ತಿನಲ್ಲಿದ್ದ ಯುವಕರ ಗುಂಪೊಂದು ಇದೇ ಘಟಪ್ರಭಾ ಪೊಲೀಸರ ವಾಹನಕ್ಕೆ ಕಲ್ಲು ಎಸೆದಿದ್ರು ಅನ್ನೊ ಮಾತು ಎಲ್ಲೆಡೆ ಹರಿದಾಡಿತ್ತು.

ಇದೀಗ ಇದೇ ಪೊಲೀಸರ ಸಮ್ಮುಖದಲ್ಲೇ ಅಂದರ್ ಬಾಹರ್ ಜೂಜಾಟ ನಡಿತಿದ್ರೆ ಹೇಗಿರುತ್ತೆ..!? ಹೌದು… ಇದು ಎಲ್ಲರ ಹುಬ್ಬೇರುವಂತೆ ಮಾಡಿದ್ರು ವಾಸ್ತವ ಸಂಗತಿ. ಘಟಪ್ರಭಾದ ಪ್ರತಿಷ್ಠಿತ ಜೆಜಿ ಆಸ್ಪತ್ರೆ ಬಳಿ ಯುವಕರು ಗುಂಪು ಗುಂಪಾಗಿ ಕುಳಿತು ಅಂದರ್ ಬಾಹರ್ ಇಸ್ಪಿಟ್ ಆಟದಲ್ಲಿ ತೊಡಗಿದ್ರು. ಓರ್ವ ಯುವಕ ಇಸ್ಪಿಟ್ ಎಲೆಗಳನ್ನು ಮಿಕ್ಸ್ ಮಾಡುತ್ತಿದ್ರೆ, ಮತ್ತೊಬ್ಬ ಯುವಕ ಗರಿ ಗರಿ ನೋಟುಗಳನ್ನು ಎಣಿಸಿವುದರಲ್ಲಿ ಮಗ್ನನಾಗಿದ್ದಾನೆ. ಇವರೆಲ್ಲರೂ ಅಂದರ್ ಬಾಹರ್ ಆಟದಲ್ಲಿ ಅದೆಷ್ಟು ಮಗ್ನರಾಗಿದ್ದಾರೆ ಎಂದರೆ ಇವರ ಪಕ್ಕದಲ್ಲಿರುವ ರಸ್ತೆಯಲ್ಲಿ ಪೊಲೀಸ್ ಇಲಾಖೆಯ ಹೈವೆ ಪೆಟ್ರೋಲ್ ವಾಹನ, ಅದರೊಳಗೆ ಎಎಸ್ಐ ಮಟ್ಟದ ಅಧಿಕಾರಿ, ಸಿಬ್ಬಂದಿಯಿದ್ರು ಜೂಜಾಟ ಆಡೋರಿಗೆ ಮಾತ್ರ ಡೊಂಟ್ ಕೇರ್.

ಸಾಮಾನ್ಯವಾಗಿ ನೋಡೊದಾದ್ರೆ ಇಸ್ಪಿಟ್, ಮಟ್ಕಾದಂತ ಚಟುವಟಿಕೆಯಲ್ಲಿ ತೊಡಗಿದ್ದವರು ಪೊಲೀಸರ ವಾಹನ ಇರಲಿ, ಯಾರಾದ್ರು ಪೊಲೀಸರ ಹೆಸರು ತೆಗೆದ್ರೆ ಸಾಕು, ಅಲ್ಲಿಂದ ಓಡಿಹೋಗೊದನ್ನ ಕಂಡಿದಿವಿ. ಆದ್ರೆ ಈ ಪ್ರಕರಣದಲ್ಲಿ ಪೊಲೀಸರು ಪಕ್ಕದಲ್ಲಿದ್ರು ಈ ಯುವಕರು ಮಾತ್ರ ಯಾವ ಭಯವು ಇಲ್ಲದೇ ರಾಜಾರೋಷವಾಗಿ ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದಾರೆ ಅಂದ್ರೆ ಅವರಿಬ್ಬರ ಮಧ್ಯೆ ಅದೆಂಥ ಅಂಡರಸ್ಟ್ಯಾಂಡ್ ಇರಬೇಕು..!? ನೀವೇ ಊಹೆ ಮಾಡ್ಕೊಳ್ಳಿ. ಸಧ್ಯ ಪೊಲೀಸರ ಸಮ್ಮುಖದಲ್ಲೇ ಯುವಕರ ಗುಂಪು ಅಂದರ್ ಬಾಹರ್ ಇಸ್ಪಿಟ್ ಆಟ ಆಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ದಕ್ಷತೆಗೆ ಹೆಸರಾದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಸಾಹೇಬ್ರು ಘಟಪ್ರಭಾ ಪೊಲೀಸರ ಈ ಕಣ್ಣಾಮುಚ್ಚಾಲೆ ಆಟವನ್ನ ಹೇಗೆ ಚೆಕ್-ಮೇಟ್ ಮಾಡ್ತಾರೆ ಕಾದು ನೋಡಬೇಕು.

error: Content is protected !!