ಉಡುಪಿ: ಮಹಿಳೆಯರ ಮದುವೆ ವಯಸ್ಸು 21ಕ್ಕೆ ಏರಿಕೆ ವಿಚಾರವಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಉಡುಪಿಯಲ್ಲಿ ಮಾತನಾಡಿದ್ದಾರೆ.
ಮಹಿಳೆಯರ ಮದುವೆ ವಯಸ್ಸನ್ನು 21 ಕ್ಕೆ ಏರಿಸುವುದು ಅವಶ್ಯ. ಮಹಿಳೆಯರ ಸಬಲೀಕರಣಕ್ಕೆ ಈ ನೀತಿ ಜಾರಿಯಾಗುತ್ತಿದೆ. ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಯ ಉದ್ದೇಶವೂ ಇದೇ ಆಗಿದೆ. ಮಹಿಳೆಯರು ಹೆಚ್ಚು ಶಿಕ್ಷಿತರಾಗಬೇಕು. ಅದಕ್ಕಾಗಿ ಈ ಕಾನೂನು ಜಾರಿಯಾಗುತ್ತಿದೆ ಎಂದಿದ್ದಾರೆ.
ಇನ್ನು ಹೆಚ್ಚಿನ ಕಡೆಗಳಲ್ಲಿ 18 ತುಂಬಿದ ಯುವತಿಗೆ ಮದುವೆ ಮಾಡಲಾಗುತ್ತೆ. ಹೆಣ್ಮಕ್ಕಳ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಲಾಗುತ್ತಿತ್ತು. ಪದವಿ ಪಡೆಯಲಾಗದೇ ಅನೇಕ ವಿದ್ಯಾರ್ಥಿನಿಯರಿಗೆ ತೊಂದರೆ ಆಗಿದೆ. ಮನೆಯವರ ಒತ್ತಾಯಕ್ಕೆ ಮಣಿದು ಮದುವೆಯಾದ ಘಟನೆಗಳು ಅನೇಕ ಇದೆ.
ಸಣ್ಣ ವಯಸ್ಸಿನಲ್ಲಿ ಹೆಣ್ಮಕ್ಕಳು ಮದುವೆ ಜೀವನದ ಬಗ್ಗೆ ಮಾನಸಿಕವಾಗಿ ಸಿದ್ದವಾಗಿರುವುದಿಲ್ಲ. ಅದಕ್ಕಾಗಿ ರಾಷ್ಟ್ರೀಯ ಮಹಿಳಾ ಆಯೋಗ ಈ ಸಲಹೆ ನೀಡಿತ್ತು. ಯುವತಿಯ ಮದುವೆ ವಯಸ್ಸನ್ನು 21 ಕ್ಕೆ ಏರಿಸಬೇಕೆಂದು ಸರಕಾರಕ್ಕೆ ಸಲಹೆ ನೀಡಿತ್ತು. ಯುವತಿಗೆ ಮದುವೆ ಮಾಡಿಸಿದರೆ ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಗಳಿಂದ ಸಾಭೀತಾಗಿದೆ.
ಗರ್ಭಿಣಿ, ಬಾಣಂತಿ ಜೀವನ, ಮಗುವನ್ನು ನೋಡಿಕೊಳ್ಳುವುದು ತಿಳಿದಿರುವುದಿಲ್ಲ. ಪ್ರತಿ ಲಕ್ಷ ಹೆರಿಗೆಯ ಪೈಕಿ 113 ಮಕ್ಕಳು 30 ದಿನಗಳೊಳಗೆ ಮೃತರಾಗುತ್ತಿದ್ದಾರೆ. ಶೀಘ್ರ ಮದುವೆಯಾಗುವುದೇ ಇದಕ್ಕೆ ಕಾರಣ. ಬಾಲ್ಯ ವಿವಾಹವನ್ನು ಸಂಪೂರ್ಣ ನಿಷೇಧಿಸಲು ಈ ಕರಡು ಮಸೂದೆ ಜಾರಿಗೆ ತರುವ ಅವಶ್ಯಕತೆ ಇದೆ ಎಂದಿದ್ದಾರೆ.