ಕೂಗು ನಿಮ್ಮದು ಧ್ವನಿ ನಮ್ಮದು

ತನ್ನ ಹೆತ್ತವರ ವಿರುದ್ಧ ದೂರು ನೀಡಿ ತಾನೇ ಜೈಲು ಪಾಲಾದ ಮಗ

ಹೈದರಾಬಾದ್: ತನ್ನ ಹೆತ್ತವರೇ ತನ್ನ ಸಹೋದರನನ್ನು ಕೊಂದಿದ್ದಾರೆ ಎಂದು ಸುಳ್ಳು ದೂರನ್ನು ನೀಡಿರುವ ವ್ಯಕ್ತಿ ತಾನೇ ಜೈಲು ಪಾಲಾಗಿರುವ ಘಟನೆಯು ಹೈದರಾಬಾದ್‍ನಲ್ಲಿ ಸಂಭವಿಸಿದೆ. ಆರೋಪಿಯನ್ನು ಬಂಜಾರಾ ಹಿಲ್ಸ್‌ನ ನಂದಿ ನಗರ ನಿವಾಸಿ ಬಾನೋತ್ ಲಾಲು ಎಂದು ಗುರುತಿಸಲಾಗಿದ್ದು, ಪೊಲೀಸ್ ತನಿಖೆಯಲ್ಲಿ ಲಾಲು ಪೋಷಕರ ವಿರುದ್ಧ ಮಾಡಿರುವ ದೂರು ಸುಳ್ಳು ಎಂದು ತಿಳಿದ ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದ್ದಿದ್ದಾರೆ.

ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಲಾಲು ಡಿಸೆಂಬರ್ ಹದಿನೇಳರಂದು ತಡ ರಾತ್ರಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾನೆ. ಆಗ ತನ್ನ ಸಹೋದರನನ್ನು ಹೆತ್ತವರು ಕೊಂದಿದ್ದಾರೆ ಎಂದು ಹೇಳಿ ಪೋಷಕರ ವಿರುದ್ಧ ಆರೋಪ ಮಾಡಿದ್ದಾನೆ. ಮಾಹಿತಿ ಪಡೆದಿರುವ ಪೊಲೀಸರು ತಕ್ಷಣವೇ ಸ್ಥಳಕ್ಕೆ ಬಂದು ತನಿಖೆ ಮಾಡಿದ್ದಾರೆ. ಯಾವುದೇ ಕೊಲೆ ನಡೆದಿಲ್ಲ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಆದ್ರೆ ಲಾಲು ಯಾಕೆ ಇಂಥಹ ಆರೋಪನ್ನು ಮಾಡಿದ್ದಾನೆ ಎಂದು ವಿಚಾರಿಸಿದಾಗ ಸತ್ಯ ಹೊರ ಬಂದಿದೆ.

ಲಾಲು ಸಹೋದರ ಅನಾರೋಗ್ಯದಿಂದ ಒಂದು ತಿಂಗಳ ಹಿಂದೆಯೇ ಸಾವನ್ನಪ್ಪಿದ್ದನು. ಆದ್ರೆ ಲಾಲು ತಮಾಷೆಗೆ ಪೊಲೀಸರು ಅಲರ್ಟ್ ಆಗಿದ್ದಾರಾ ಅಥವಾ ಇಲ್ಲವಾ ಎಂದು ಪರೀಕ್ಷೆ ಮಾಡಲು ನಕಲಿ ದೂರು ನೀಡಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ದೂರನ್ನು ಪರಿಶೀಲಿಸಿ, ಪೊಲೀಸರನ್ನು ತಪ್ಪುದಾರಿಗೆಳೆಯುವ ಜೊತೆಗೆ ಗಾಬರಿಯನ್ನುಂಟುಮಾಡುವ ತಪ್ಪು ಮಾಹಿತಿ ನೀಡಿರುವ ಲಾಲುಗೆ ಮೂರು ದಿನಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.

error: Content is protected !!