ಕೂಗು ನಿಮ್ಮದು ಧ್ವನಿ ನಮ್ಮದು

100 ದಿನ ಕೂಲಿ ಕೆಲಸ ಪೂರೈಸಿದ ಕೂಲಿಕಾರರಿಗೆ ಬೆಸ್ ಬಾಲ್ ಕ್ಯಾಪ್ ವಿತರಣೆಗೆ ಟೆಂಡರ್ ಆಹ್ವಾನ

ಬೆಳಗಾವಿ: 2020-21 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 100 ದಿನ ಕೂಲಿ ಕೆಲಸ ಪೂರೈಸಿದ ಕೂಲಿಕಾರರಿಗೆ ಬೆಸ್ ಬಾಲ್ ಕ್ಯಾಪ್ ಒದಗಿಸಲು ಅಲ್ಪಾವಧಿ ಟೆಂಡರ್ ಕರೆಯಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ದರ್ಶನ ಎಚ್.ವಿ ತಿಳಿಸಿದ್ದಾರೆ.

ಆನ್ ಲೈನ್ ನಲ್ಲಿ ಟೆಂಡರ್ ದಾಖಲಿಸುವ ದಿನಾಂಕ ಡಿಸೆಂಬರ್ 22 ಮತ್ತು ಆನ್ ಲೈನ್ ನಲ್ಲಿ ಟೆಂಡರ್ ದಾಖಲಿಸಲು ಜನೇವರಿ 1 ಕೊನೆಯ ದಿನಾಂಕವಾಗಿದ್ದು, ಟೆಂಡರ್ ತೆರೆಯುವ ದಿನಾಂಕ ಜನೇವರಿ 4 ರಂದು ನಿಗದಿಪಡಿಸಲಾಗಿದೆ. ಕೂಲಿಕಾರರ ಕುಟುಂಬದ ಸದಸ್ಯರಿಗೆ IEC ಕಾರ್ಯಕ್ರಮದಡಿ ಯೋಜನೆಯ ಮಾಹಿತಿಯುಳ್ಳ ಬೆಸ್ ಬಾಲ್ ಕ್ಯಾಪ್ ಒದಗಿಸ ಬೇಕಾಗಿರುವುದರಿಂದ ಅರ್ಹ ನೊಂದಾಯಿತ ವಿತರಕರಿಂದ ಇ-ಟೆಂಡರ ಮುಲಕ ಪ್ರಕಟಣೆ ಹೊರಡಿಸಿಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು Technical specification, ಷರತ್ತುಗಳು ಹಾಗೂ ವಿವರಗಳನ್ನು e.procurement portal ನಲ್ಲಿ ವೀಕ್ಷಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ದರ್ಶನ ಎಚ್.ವಿ ತಿಳಿಸಿದ್ದಾರೆ.

error: Content is protected !!