ಗೋಕಾಕ್: ಕರ್ನಾಟಕ ವಿಶ್ವನಿರ್ಮಾಣ ಸೇನೆ ಗೋಕಾಕ ತಾಲೂಕು ಘಟಕ ವತಿಯಿಂದ ಬಸವೇಶ್ವರ ಸರ್ಕಲ್ ದಿಂದ ಮಿನಿ ವಿಧಾನ ಸೌಧದ ವರೆಗೆ ನಾಡ ವಿರೋಧಿ ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ಘೋಷಣೆ ಕೂಗುತ್ತಾ ಮೇರವಣಿಗೆ ಮುಖಾಂತರ ಗೋಕಾಕ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ವಿಧಾನಸಭೆ ಅಧಿವೇಶನ ನಡೆಯುವ ಸಮಯದಲ್ಲೆ ಪ್ರತೀ ಭಾರಿ ಪ್ರತಿರೋಧ ತೋರಿ ಅನುಮತಿ ಇಲ್ಲದೆ ಎಂಇಎಸ್ ಸಂಘಟನೆ ಮಾಹಾಮೇಳಾವ ಹಮ್ಮಿಕೊಳ್ಳುತ್ತೆ. ಇದನ್ನು ಕರ್ನಾಟಕ ವಿಶ್ವನಿರ್ಮಾಣ ಸೇನೆ ಖಂಡಿಸುತ್ತದೆ. ಶಾಂತಿ ಪ್ರೀಯ ಕನ್ನಡಿಗರ ಸ್ವಾಭಿಮಾನವನ್ನು ಪದೆ ಪದೆ ಕೆದಕುತ್ತಿರುವ ಶಿವಸೇನೆ ಮತ್ತು ಎಂಇಎಸ್‍ನ್ನು ಕೂಡಲೇ ರಾಜ್ಯದಲ್ಲಿ ನಿಷೇಧಿಸಬೇಕು, ಮಹಾರಾಷ್ಟ್ರ ಏಕೀಕರಣ ಸಮಿತಿಯ
ಮುಖಂಡನಿಗೆ ಮಸಿ ಬಳಿದ ಕನ್ನಡಪರ ಹೋರಾಟಗಾರ ಸಂಪತ್ ಕುಮಾರ ದೇಸಾಯಿ ವಿರುದ್ಧ ಕೊಲೆಯತ್ನ ಪ್ರಕರಣವನ್ನು ದಾಖಲಿಸಿದ ಪೋಲೀಸರ ವಿರುದ್ಧ
ಕ್ರಮಕೈಕೊಳ್ಳಬೇಕು ಹಾಗೂ ಪ್ರಕರಣವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಲಾಯಿತು.
ಇದೆ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಡಾ ಅಯೂಬ ಪೀರಜಾದೆ ಮಾತನಾಡಿ, ಬೆಳಗಾವಿಯ ಅನಗೋಳದಲ್ಲಿ ಪ್ರತಿಷ್ಠಾಪಿಸಿದ್ದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ಭಗ್ನಗೊಳಿಸಿ, ವಿಕೃತಿ ಮೆರೆದಿರುವ ಘಟನೆ ಕರ್ನಾಟಕ ವಿಶ್ವನಿರ್ಮಾಣ ಸೇನೆ ಸಹಿಸುವುದಿಲ್ಲ. ಕನ್ನಡ ನಾಡಿನ ಹೆಮ್ಮೆಯ ಪುತ್ರ ರಾಯಣ್ಣನ ಗೌರವಕ್ಕೆ ಚ್ಯುತಿ ತರುವ ಇಂತಹ ಹೀನ ಕೃತ್ಯ ಶಿಕ್ಷಾರ್ಹ ಅಪರಾಧ. ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಿದರು.
ಸಂಸ್ಥಾಪಕ ಅಧ್ಯಕ್ಷ ಡಾ ಅಯೂಬ ಪೀರಜಾದೆ, ತಾಲೂಕ ಅಧ್ಯಕ್ಷ ಸಭಾಷ ಹೊಸಮನಿ, ಕಾರ್ಯದರ್ಶಿ ಶಿವು ಪೂಜಾರಿ, ಕೃಷ್ಣಪ್ಪ ಪುಜಾರಿ, ರೇಖಾ ತಳಕೇರಿ, ಮಹೇಬುಬ ಪೀರಜಾದೆ, ಸುನೀಲ್, ರಫೀಕ್ ಖಾಜಿ ಹಾಗೂ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.