ಬೆಳಗಾವಿ: ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ಮರುಸ್ಥಾಪನೆ ಆಗಿರುವ ರಾಯಣ್ಣನ ಪುತ್ಥಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೆಲ ಪುಂಡರು ಸಂಗೋಳ್ಳಿ ರಾಯಣ್ಣ ಮೂರ್ತಿಯನ್ನು ವಿರೂಪ ಮಾಡಿದ್ದನ್ನು ಪೊಲೀಸರು ಸರಿ ಮಾಡಿದ್ದಾರೆ. ಸಂಗೋಳ್ಳಿ ರಾಯಣ್ಣ ವಿರೂಪಗೊಳಿಸಿದ್ದು ಅತ್ಯಂತ ಖಂಡನೀಯ ಘಟನೆ. ಸಂಗೋಳ್ಳಿ ರಾಯಣ್ಣ ಯಾವುದೋ ಒಂದು ಜಾತಿಗೆ ಸೀಮಿತವಾಗಿಲ್ಲ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಓರ್ವ ಸ್ವಾತಂತ್ರ್ಯ ಸೇನಾನಿ, ದೇಶಭಕ್ತ. ಅಂತವರ ಪುತ್ಥಳಿಯನ್ನು ವಿರೂಪ ಮಾಡುವಂತಹವರು ಪುಂಡರು ಇರವೇಕು ಇಲ್ಲವೇ ಪೊಕ್ರಿಗಳಿರಬೇಕು. ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಎಂಇಎಸ್ ಬ್ಯಾನ್ ವಿಚಾರಕ್ಕೆ, ಎಂಇಎಸ್ ಬ್ಯಾನ್ ಮಾಡಬೇಕೆಂಬುದು ಜನರ ಒತ್ತಾಯವಿದೆ. ಇಲ್ಲಿನ ಜನರನ್ನು ಪ್ರತಿಮೆಯನ್ನು ಕೆರೆ ದಂಡೆಯ ಮೇಲೆ ಮಾಡಬೇಕು. ದೊಡ್ಡದಾಗಿ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಭದ್ರತೆ ಇರುವ ರೀತಿಯ ಮಾಡಬೇಕು ಎಂಬುದನ್ನು ಹೇಳಿದ್ದಾರೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ. ಪ್ರತಿಭಟನೆ ಮಾಡೊದು ಪ್ರಜಾಪ್ರಭುತ್ವ ಮೂಲ ಉದ್ದೇಶ. ಎಂಇಎಸ್ ಪುಂಡರು ಅವರಿಗೆ ಕಾನೂನು ಇಲ್ಲಾ. ಅವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಆಯುಧಗಳನ್ನು ಹಿಡಿದುಕೊಂಡು ಈ ರೀತಿ ಮಾಡ್ತಿದ್ದಾರೆ ಅಂದರೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತಾನೆ ಅರ್ಥ. ಪೊಲೀಸ್ ನವರ ಬಗ್ಗೆ ಭಯವಿಲ್ಲ. ಬಿಜೆಪಿ ಸರ್ಕಾರದಲ್ಲಿ ಇಂಟಲಿಜೆನ್ಸ್ ಸತ್ತು ಹೋಗಿದೆ ಎಂದರು.