ಉಡುಪಿ: ಕೃಷ್ಣ ನಗರಿಗೂ ಕಾಲಿಟ್ಟ ಒಮಿಕ್ರಾನ್. ಉಡುಪಿಯಲ್ಲಿ ಎರಡು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಉಡುಪಿಯ 73 ವರ್ಷದ ಮಹಿಳೆ ಮತ್ತು 82 ವರ್ಷದ ಪುರುಷನಲ್ಲಿ ಒಮಿಕ್ರಾನ್ ಧೃಡಪಟ್ಟಿದೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಮೂರನೇ ಅಲೆಯ ಮೊದಲ ಒಮಿಕ್ರಾನ್ ಸೋಂಕು ಪತ್ತೆಯಾದಂತಾಗಿದೆ.
ಇನ್ನು ಓಮಿಕ್ರಾನ್ ಧೃಡಪಟ್ಟ ಇಬ್ಬರಿಗೂ ಎರಡೂ ಡೋಸ್ ಲಸಿಕೆ ಪೂರ್ಣಗೊಂಡಿದೆ. ಕುಟುಂಬದಲ್ಲಿ ಕೊವಿಡ್ ಪಾಸಿಟಿವ್ ಪತ್ತೆಯಾದ ಹಿನ್ನಲೆಯಲ್ಲಿ ಪರೀಕ್ಷೆ ಇವರಿಗೂ ಪರೀಕ್ಷೆ ನಡೆಸಲಾಗಿತ್ತು.
ಪ್ರಾಥಮಿಕ ಸಂಪರ್ಕಿತರಾದ ಕಾರಣ ಪರೀಕ್ಷೆಗೆ ಒಳಪಟ್ಟ ಕುಟುಂಬದ 4 ಮಂದಿ ಸದಸ್ಯರ ಪೈಕಿ ಒಂದೇ ಕುಟುಂಬದ ಮೂವರಿಗೆ ಕೊವಿಡ್ ಪಾಸಿಟಿವ್ ಧೃಟಪಟ್ಟಿದೆ. ಡಬ್ಲ್ಯೂಜಿಎಸ್ ಪರೀಕ್ಷೆ ಯಲ್ಲಿ ಇಬ್ಬರಿಗೆ ಒಮಿಕ್ರಾನ್ ದೃಢಪಟ್ಟಿದ್ದು, ಸೋಂಕು ಹರಡಿದ ಮೂಲ ಸಂಪರ್ಕಿತರನ್ನು ಆರೋಗ್ಯ ಇಲಾಖೆಯವ್ರು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಓಮಿಕ್ರಾನ್ ಧೃಡಪಟ್ಟ ಇಬ್ಬರೂ ರೋಗಿಗಳಲ್ಲಿ ಕೂಡಾ ಯಾವುದೇ ಕೊವಿಡ್ ರೋಗ ಲಕ್ಷಣ ಇರಲಿಲ್ಲ. ಉಡುಪಿ, ಭದ್ರಾವತಿ, ಧಾರವಾಡ, ಮಂಗಳೂರಿನಲ್ಲಿ ಸೇರಿದಂತೆ ರಾಜ್ಯದಲ್ಲಿ ಒಟ್ಟು 5 ಒಮಿಕ್ರಾನ್ ಪ್ರಕರಣ ದೃಢಪಟ್ಟಿದೆ.