ಧಾರವಾಡ: ಇವತ್ತು ಬೆಳಗಾವಿ ಸುವರ್ಣ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಇದೆ. ಮೊದಲು ಬೆಳಗಾವಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡ್ತೆವೆ. ಅಲ್ಲಿಂದ ಸುವರ್ಣ ವಿಧಾನಸೌಧಕ್ಕೆ ಪಾದಯಾತ್ರೆ ಇದೆ ಎಂದು ಧಾರವಾಡದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.
ನಾವು ಎಲ್ಲರೂ ರಾತ್ರೋರಾತ್ರಿ ಕರವೇ ಕಾರ್ಯಕರ್ತರು ಬೆಳಗಾವಿಗೆ ಬಂದಿದ್ದಾರೆ. ಇನ್ನು ಹಲವು ಕಾರ್ಯಕರ್ತರು ಬರುತಿದ್ದಾರೆ. ಮದ್ಯಾಹ್ನ 12 ಗಂಟೆಗೆ ಸುವರ್ಣ ವಿಧಾನಸೌಧಕ್ಕೆ ಹೋಗ್ತೆವೆ. ಹಲವು ವರ್ಷಗಳಿಂದ ಎಂಇಎಸ್ ಪುಂಡಾಟಿಕೆ ನೋಡುತ್ತ ಬಂದಿದ್ದೆನೆ. ಅವರು ಈಗ ಕನ್ನಡದ ಬಾವುಟ ಸುಡುವದು, ಸಂಗೋಳ್ಳಿ ರಾಯಣ್ಣನ ಮೂರ್ತಿ ಭಗ್ನ ಮಾಡುವುದು, ಕನ್ನಡದ ವಾಹನ ಸುಡುವದು ಮಾಡುವದು ಸೇರಿದಂತೆ ಇಂಥ ಪುಂಡಾಟಿಕೆ ಮಾಡುತ್ತಲೇ ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಂದು ಕಡೆ ಶಿವಸೇನೆ ಮತ್ತೊಂದು ಕಡೆ ಎಂಇಎಸ್ ಪುಂಡರು ಪುಂಡಾಟ ನಡೆಸುತ್ತಿದ್ದಾರೆ. ನಾವು ರಾಜ್ಯ ಸರ್ಕಾರಕ್ಕೆ ಎಂಇಎಸ್ ನಿಷೇಧ ಮಾಡಲು ಒತ್ತಾಯಿಸಿದ್ದೆವೆ. ಆದರೆ ಅವರು ಎಂಇಎಸ್ ಒಲೈಸುತ್ತಲೇ ಬಂದಿದ್ದಾರೆ. ಇದರಿಂದ ಎಂಇಎಸ್ ಮಿತಿಮೀರಿ ಗುಂಡಾಗಿರಿ ದಾದಾಗಿರಿ ಮಾಡುತಿದ್ದಾರೆ. ಸಿಎಂಗೆ ಹಾಗೂ ಗೃಹ ಸಚಿವರಿಗೆ ಭೇಟಿ ಮಾಡಿ ಹೇಳಲು ಬಂದಿದ್ದೆವೆ. ಸಾವಿರಾರು ಕಾರ್ಯಕರ್ತರು ಬರಲಿದ್ದಾರೆ.
ಬೆಂಗಳೂರಿನಿಂದ ಬೆಳಗಾವಿಗೆ ನೂರು ವಾಹನ ಬಂದಿವೆ. 1999 ರಿಂದ ಇದನ್ನ ಎರುರಿಸಿಕೊಂಡೇ ಬಂದಿದ್ದೆವೆ. ಬೆಳಗಾವಿಯಲ್ಲಿ 7 ಜನ ಎಂಇಎಸ್ ಶಾಸಕರು ಆಯ್ಕೆ ಆಗುತಿದ್ದರು. ಈಗ ಅವರು ಯಾರೂ ಇಲ್ಲ, ಸಂಪೂರ್ಣ ನೆಲ ಕಚ್ಚಿದ್ದಾರೆ. ಅದನ್ನ ಸಹಿಸಿಕೊಳ್ಳಲು ಆಗದೇ ಅವರು ಗುಂಡಾಗಿರಿ ಮಾಡುತಿದ್ದಾರೆ. ಅದನ್ನ ಬೆರು ಸಮೇತ ಕಿತ್ತು ಹಾಕಬೇಕು.
ಬೆಳಗಾವಿ ಶಾಸಕರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇಂತ ಸಂದರ್ಭದಲ್ಲಿ ಅವರು ಧ್ವನಿಯತ್ತಬೇಕು, ಇಲ್ಲದಿದ್ದರೆ ನಾವು ಧ್ವನಿ ಎತ್ತಬೇಕಾಗುತ್ತೆ. ನಮ್ಮ ಸರ್ಕಾರ ರಣ ಹೇಡಿ ಸರ್ಕಾರ ಆಗಬಾರದು. ನಮ್ಮ ಪೊಲೀಸ್ ವ್ಯವಸ್ಥೆ ರಣಹೇಡಿ ಅಲ್ಲ. ಅದಕ್ಕೆ ನಾಡದ್ರೋಹಿಗಳನ್ನು ಬಗ್ಗು ಬಡಿಯಬೇಕು. ಪೊಲೀಸರು ಏನಾದ್ರು ಮಾಡಲಿ ನಾನು ಅಂಜಲ್ಲ, ಹಿಂದೆ ಸರಿಯಲ್ಲ. ಉದ್ದೇಶದಂತೆ ಬೆಳಗಾವಿಗೆ ಹೊಗಿ ಮುತ್ತಿಗೆ ಹಾಕ್ತೆವೆ. ಕರವೇ ಉದ್ದೇಶ ಇಡೆರಿಸಿಕೊಳ್ಳಲಿದೆ. ನಾವು ಸುವರ್ಣ ವಿಧಾನಸೌಧಕ್ಕೆ ಹೋಗೇ ಹೋಗ್ತೆವಿ ಎಂದು ನಾರಾಯಣಗೌಡ್ರು ಗುಡುಗಿದ್ರು.