ಬೆಳಗಾವಿ: ಬಿಜೆಪಿಯ ದೆಹಲಿ ವರಿಷ್ಠರ ಆಶೀರ್ವಾದದಿಂದ ನಾನು ಜೀವಂತ ಇದ್ದೇನೆ, ಇಲ್ಲದಿದ್ರೆ ನನ್ನ ಮುಗಿಸುತ್ತಿದ್ರು ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಬೇಕು. ಹೀಗಾಗಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದ ಸಾಹುಕಾರ ನಿಮಗೆ ಬೇಕಿರೋ ಉತ್ತರ ಇಂದು ಸಿಗಲ್ಲ ಎಂದು ಮಾಧ್ಯಮ ಸ್ನೇಹಿತರಿಗೆ ನಗುತ್ತಲೇ ಪ್ರತಿಕ್ರಿಯಿಸಿದರು. ಪರಿಷತ್ ಫಲಿತಾಂಶ ದಿನ ಡಿಶಂಬರ್ 14 ರಂದು ಡಿಕೆಶಿ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ. ಅತ್ಯಂತ ಕಠೋರವಾಗಿ ಉತ್ತರ ಕೊಡ್ತಿನಿ ಎಂದ ಸಾಹುಕಾರ್, ನಾವು ಈಗ ಚುನಾವಣೆ ಮೂಡನಲ್ಲಿ ಇದ್ದೇವೆ. ಹತಾಶೆ ಮನೋಭಾವದಿಂದ ಡಿಕೆಶಿ ಟೀಕೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
1985 ರಿಂದ ಇಲ್ಲಿಯ ವರೆಗೆ ನಡೆದ ಎಲ್ಲಾ ವಿಚಾರ ಬಹಿರಂಗ ಮಾಡ್ತಿನಿ. ನನ್ನ ವ್ಯಕ್ಯಿತ್ವ ಏನು, ಡಿಕೆಶಿ ವ್ಯಕ್ತಿತ್ವ ಏನು ಎಂದು ಹೇಳ್ತಿನಿ. ಅಂದು ಒಪನ್ ವಾರ್ ಆಗಲಿ. ಫಲಿತಾಂಶದ ದಿನ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದರು. ಡಿಕೆಶಿ ಕುಟುಂಬ, ಜಾರಕಿಹೊಳಿ ಕುಟುಂಬ ಎನಿತ್ತು ಎಲ್ಲಾ ಬಹಿರಂಗ ಮಾಡ್ತಿನಿ ಎಂದಿರುವ ಸಾಹುಕಾರ್, ದೆಹಲಿ ವರಿಷ್ಠರ ಆಶೀರ್ವಾದ ನನ್ನ ಮೇಲೆ ಇದೆ. ದೆಹಲಿ ವರಿಷ್ಠರು ಇದ್ದಾರೆ ಎಂದು ನಾನು ಜೀವಂತ ಇದ್ದೇನೆ. ಇಲ್ಲವೇ ಇಷ್ಟೊತ್ತಿಗೆ ನನ್ನನು ಮುಗಿಸಿ ಬಿಡ್ತಿದ್ರು. ಇಷ್ಟೊತ್ತಿಗೆ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಮುಗಿಸಿ ಬಿಡುತ್ತಿದ್ರು ಎಂದ ಸಾಹುಕಾರ್, ಸಂಘ ಪರಿವಾರದ ನಾಯಕರ ಬೆಂಬಲದಿಂದ ನಾಯಕನಾಗಿದ್ದಾನೆ. ಬ್ಲ್ಯಾಕ್ ಮೇಲ್ ಯಾರು ಮಾಡ್ತಾರೆ ಎಂದು 14 ನೇ ತಾರೀಕು ಹೇಳುತ್ತೇನೆ.
ಈಗ ಇದ್ದ ಎಂಎಲ್ಎ ಉಳಿಸಿಕೊಳ್ಳಲಿ ಆಮೇಲೆ ನೋಡೊಣ. 14 ರಂದು ಡಿಕೆಶಿ, ಜಾರಕಿಹೊಳಿ ವಾರ್ ಆಗಲಿ ನೋಡೊಣ ಎಂದು ಸವಾಲು ಹಾಕಿದ್ರು. 2023 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ನಾವು ಪ್ರಯತ್ನ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಸಾಹುಕಾರ್ ಮಾತನಾಡಿದ್ರು.