ಹಾಸನ: ಹಾಸನದಲ್ಲಿ MLC ಚುನಾವಣೆ ಗರಿಗೆದರಿದೆ. ಈ ನಡುವೆ ಸಂಸತ್ ಚುನಾವಣೆಯಲ್ಲಿ JDS ಬೆಂಬಲಿಸಿ ನಾವು ತಪ್ಪು ಮಾಡಿದೆವು ಎಂದು JDS ವಿರುದ್ಧ MLC ಗೋಪಾಲಸ್ವಾಮಿ ವಾಗ್ದಾಳಿ ನಡೆಸಿದ್ರು. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಕಾಂಗ್ರೆಸ್ ಪಕ್ಷದ MLC ಅಭ್ಯರ್ಥಿಯಾಗಿ M.ಶಂಕರ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಂಸತ್ ಚುನಾವಣೆ ಅಲ್ಲಿ JDS ಬೆಂಬಲಿಸಿ ನಾವು ತಪ್ಪು ಮಾಡಿದ್ದೇವು. ಹೈಕಮಾಂಡ್ ಆದೇಶದಿಂದ ಹೀಗೆ ಮಾಡಬೇಕಾಯ್ತು.
ಚುನಾವಣೆ ಗೆದ್ದ ಬಳಿಕ ಸೌಜನ್ಯಕ್ಕೂ ನಮ್ಮನ್ನು ಮಾತನಾಡಿಸಿ ಒಂದು ಕಪ್ ಕಾಫಿ, ಟಿ ಕುಡಿಸಲಿಲ್ಲ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದವರು ಮನೆ ಮನೆಗೆ ಬಂದು ಕಾಲಿಗೆ ಬಿದ್ರು. ಗೆದ್ದ ಬಳಿಕ ಸೌಜನ್ಯಕ್ಕೂ ಕೃತಜ್ಞತೆಯನ್ನು ಸಲ್ಲಿಸಲಿಲ್ಲ. ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ಅವರಿಗೆ ಪಾಠ ಕಲಿಸುತ್ತೇವೆ. ಎಂದು ಗೋಪಾಲಸ್ವಾಮಿ ಆಕ್ರೋಶ ಹೊರಹಾಕಿದ್ರು.
ಈಗಾಗಲೇ ಹಾಸನ ಕ್ಷೇತ್ರದಿಂದ JDS ಮತ್ತು MLC ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಹೆಚ್.ಡಿ .ರೇವಣ್ಣ ಅವರ ಮಗ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಿರುವುದರಿಂದ ಹಾಸನ ಕ್ಷೇತ್ರದ MLC ಚುನಾವಣೆ ಎಲ್ಲರ ಗಮನ ಸೆಳೆಯುತ್ತಿದೆ.