ಕೊಪ್ಪಳ: ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೆಂಡ ಕಾರಿದ್ದಾರೆ. ಪ್ರತಾಪ್ ಸಿಂಹ ಗಂಡಸೋ ಅಥವಾ ಹೆಂಗಸೋ ಪಸ್ಟ್ ಚೆಕ್ ಮಾಡಬೇಕು ಎಂದು ವಾಗ್ದಾಳಿ ನಡೆಸಿದ್ರು. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡುತ್ತಾ ಸಂಸದರು ಪ್ರಿಯಾಂಕಾ ಖರ್ಗೆ ವಿರುದ್ಧ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ರು. ಪ್ರತಾಪ್ ಸಿಂಹ ಸಂಸದ ಆಗೋದಕ್ಕೆ ಲಾಯಕ್ಕಿಲ್ಲ. ಪ್ರತಾಪ್ ಸಿಂಹ ಝೀರೋ ಟ್ಯಾಲೆಂಟ್. ಯಾವುದೋ ಗಾಳಿಯಲ್ಲಿ ಜನ ಆತನಿಗೆ ವೋಟ್ ಹಾಕಿದರು ಎಂದು ಗುಡುಗಿದ್ರು.
ಪ್ರತಾಪ್ ಸಿಂಹ ಕೂಡಲೇ ಕ್ಷಮೆ ಕೇಳಬೇಕು, ಇಲ್ಲದೆ ಇದ್ದರೆ ಹೋರಾಟ ಮಾಡಲಾಗುವುದು. ಸಿಂಹ ಖರ್ಗೆ ವಿರುದ್ಧ ಅಷ್ಟೆ ಅಲ್ಲ, ಅನೇಕ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುತ್ತಾರೆ. ಬಿಟ್ ಕಾಯಿನ್ ಹಗರಣದಲ್ಲಿ BJP ಮುಖಂಡರೇ ಇದ್ದಾರೆ. ರಾಜ್ಯದಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ದೊಡ್ಡ ಹಗರಣದಲ್ಲಿ BJP ನಾಯಕರು ಭಾಗಿಯಾಗಿದ್ರು ಎಂದು ಆರೋಪಿಸಿದ್ರು.
ತನಿಖಾ ಸಂಸ್ಥೆಯಿಂದ ಎಲ್ಲವನ್ನೂ ಮರೆಮಾಚೋ ಕೆಲಸ ಮಾಡ್ತಿದ್ದಾರೆ. ಜನರ ಬೇರೆಡೆ ಸೆಳೆಯೋದು BJPಯವರ ಕೆಲಸ. ಮೈನ್ ಆಗಿ ಬಿಟ್ ಕಾಯಿನ್ ಅಲ್ಲಿ ಇರೋದೇ BJP ನಾಯಕರು ಎಂದು ಹೇಳಿದ್ರು.
ಮೈಸೂರಿನಲ್ಲಿ ಮಾದ್ಯಮ ಗೋಷ್ಠಿಯಲ್ಲಿ ಮಾತನಾಡಿದ್ದ ಸಂಸದರು, ಶೋಷಿತರ ಹೆಸರು ಹೇಳಿಕೊಂಡು ಮರಿ ಖರ್ಗೆ ಐಷಾರಾಮಿ ಜೀವನ ಮಾಡುತ್ತಿದ್ದಾರೆ. ಮರಿ ಖರ್ಗೆ ಬಾಯಲ್ಲಿ ಭ್ರಷ್ಟಾಚಾರದ ಮಾತು ಕೇಳಿದ್ರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ. ರಾಜ್ಯ ಕಾಂಗ್ರೆಸ್ನವರೇ ದುಡ್ಡು ಕಳೆದುಕೊಂಡಿದ್ದಾರೆ. ಹಾಗಾಗಿ ಅವರು ಮಾತ್ರ ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದವರೇ ಈ ಪ್ರಕರಣದಲ್ಲಿ ಇದ್ದಿದ್ರೆ ಶ್ರೀಕಿಯನ್ನು ನಾವು ಯಾಕೆ ಬಂಧಿಸುತ್ತಿದ್ದೆವು ಎಂದು ಪ್ರಿಯಾಂಕಾ ಖರ್ಗೆಗೆ ತಿರುಗೇಟು ನೀಡಿದ್ರು.