ಹೈದರಾಬಾದ್: ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರ ನಿಯಂತ್ರಣ ತಪ್ಪಿ ವೇಗವಾಗಿ ಬಂದು ಅಂಗಡಿಗೆ ನುಗ್ಗಿದ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಸಖತ್ ವೈರಲ್ ಆಗುತ್ತಿದೆ. ಈ ಘಟನೆ ವೇಳೆ ಬಟ್ಟೆ ಅಂಗಡಿಯ ಕೌಂಟರ್ ಹತ್ತಿರ ನಿಂತಿದ್ದ ೩ ಜನ ಗ್ರಾಹಕರು ಸಮಯಕ್ಕೆ ಸರಿಯಾಗಿ ಪಕ್ಕಕ್ಕೆ ಸರಿದ್ದರಿಂದ ಬಚಾವ್ ಆಗಿದ್ದಾರೆ. ಈ ಘಟನೆ ಸೋಮವಾರ ರಾತ್ರಿ ೮.೩೦ರ ಸರಿ ಸುಮಾರಿಗೆ ತೆಲಂಗಾಣದ ಖಮ್ಮಂ ಜಿಲ್ಲೆಯ ರಾವಿಚೆಟ್ಟು ಬಜಾರ್‌ನಲ್ಲಿ ಸಂಭವಿಸಿದೆ.
ಈ ವೀಡಿಯೋ CCTVಯಲ್ಲಿ ಸೆರೆಯಾಗಿದ್ದು, ನಾಲ್ಕು ಜನರು ಅಂಗಡಿಯೊಳಗೆ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ. ಇವರಲ್ಲಿ ಮೂರು ಗ್ರಾಹಕರಾಗಿದ್ದರೆ, ಓರ್ವ ಸಿಬ್ಬಂದಿಯಾಗಿದ್ದಾನೆ. ಬ್ರೇಕ್ ಫೇಲ್ ಆಗಿದ್ದರ ಪರಿಣಾಮ ನಿಯಂತ್ರಣ ತಪ್ಪಿ ಬಜಾಜ್ ಪಲ್ಸರ್ ಬೈಕ್ ಅಂಗಡಿಯ ಒಳಗೆ ನುಗ್ಗಿದ್ದು, ವಾಹನ ಸವಾರ ಕೌಂಟರ್‍ಗೆ ಜಿಗಿದಿರುವುದನ್ನು ಕಾಣಬಹುದಾಗಿದೆ. ಅಷ್ಟು ಭಯಾಂಕರವಾದ ಅಪಘಾತ ಸಂಭವಿಸಿದ್ರು. ಅದೃಷ್ಟವಶಾತ್ ೪ ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಬೈಕ್ ಸವಾರನಿಗೂ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಕೊನೆಗೆ ಅಪಘಾತದ ನಂತರ ಬೈಕ್ ಸವಾರ ಅಂಗಡಿ ಅವರಿಗೆ ಕ್ಷಮೆಯಾಚಿಸಿದ್ದಾನೆ. ಘಟನೆ ಕುರಿತಂತೆ ಪೊಲೀಸರು ವಾಹನವನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.