ಕೂಗು ನಿಮ್ಮದು ಧ್ವನಿ ನಮ್ಮದು

ಗ್ಯಾಸ್ ಮತ್ತುಅಡುಗೆ ಎಣ್ಣೆಯ ದರ ಕಡಿಮೆ ಆಗ್ಬೇಕಿದೆ: ಡಿಕೆಶಿ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಬುಧವಾರವಷ್ಟೇ ಪೆಟ್ರೋಲ್, ಡಿಸೇಲ್ ಬೆಲೆ ಕಡಿತಗೊಳಿಸಿದೆ. ಇದೀಗ ಮತ್ತೆ ಗ್ಯಾಸ್ ಮತ್ತು ಅಡುಗೆ ಎಣ್ಣೆ ದರ ಕಡಿಮೆ ಆಗಬೇಕಿದೆ ಎಂದು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ಹಾನಗಲ್ ಮತದಾರರ ಬಗ್ಗೆ ನನಗೆ ಮೊದಲೇ ನಂಬಿಕೆ ಇತ್ತು. ಆದರೆ ರೈತರು, ಕಾರ್ಮಿಕರು, ಬೀದಿ ವ್ಯಾಪಾರಿಗಳ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿರಲಿಲ್ಲ. ಸರ್ಕಾರದಿಂದಲೇ ನಿತ್ಯ ಜನರ ಪಿಕ್ ಪ್ಯಾಕೆಟ್ ಆಗುತ್ತಿತ್ತು.

ಇದರಿಂದ ಬೇಸತ್ತು ಹಾನಗಲ್ ಜನರು ಉತ್ತರ ಕೊಟ್ಟಿದ್ರು. ಜನರು ಕೊಟ್ಟ ಉತ್ತರ ನೋಡಿ ಸಿಎಂ ಬೊಮ್ಮಾಯಿ, ಮೋದಿ ಅವರು ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ. ಈಗ BJP ನಾಯಕರಿಗೆ ತಿಳುವಳಿಕೆ ಬಂದಿದೆ ಎಂದು ಡಿಕೆಶಿ ಟಾಂಗ್ ನೀಡಿದ್ರು. ಇನ್ನೂ ಗ್ಯಾಸ್, ಅಡುಗೆ ಎಣ್ಣೆ, ಮೋದಿ ಪಕೋಡ ಕರೆಯಲು ಎಣ್ಣೆ ದರ ಕಡಿಮೆ ಆಗಬೇಕಿದೆ. ದರ ಕಡಿಮೆ ಆಗದಿದ್ರೆ ಮುಂದಿನ ಚುನಾವಣೆಯಲ್ಲೂ ಇದೇ ಉತ್ತರ ಸಿಗಲಿದೆ. ನನ್ನ ದೃಷ್ಟಿ ೨೦೨೩ರ ಚುನಾವಣೆ ಮೇಲಿದೆ.

ನಾನು ಹಾನಗಲ್ ಗ್ರಾಮ ದೇವತೆಗೆ ಬೇಡಿಕೊಂಡಿದ್ದೆ. ಈಗ ದೇವಿ ವರಕೊಟ್ಟಿದ್ದಾಳೆ. ಅದಕ್ಕೆ ದೇವರ ಆರ್ಶಿವಾದ ಪಡೆಯಲು ಹೊರಟಿದ್ದೇನೆ. ಎಲ್ಲ ಜಾತಿ ಧರ್ಮ, ಜನಾಂಗ ನಮಗೆ ಬೆಂಬಲ ಕೊಟ್ಟಿದ್ದಾರೆ ಎಂದು ಡಿಕೆಶಿ ಅವರು ಹೇಳಿದ್ರು. ಹಾನಗಲ್ ಮುಖ್ಯಮಂತ್ರಿ ಅವರ ತವರು ಜಿಲ್ಲೆಯ ಕ್ಷೇತ್ರ. ಅವರು ಸಿಂದಗಿಯಲ್ಲಿ ಗೆದ್ದಿದ್ದು JDS ಸ್ಥಾನ, ಇಲ್ಲಿ ನಾವು BJP ಸೀಟ್ ಗೆದ್ದಿದ್ದೇವೆ. ಹಾನಗಲ್ ನನ್ನ ಮನೆ ಅಂತ ನಾನು ಹೇಳಿರಲಿಲ್ಲ, ನಾನು ಹಾನಗಲ್ ಅಳಿಯ, ಹಾನಗಲ್ ಮೊಮ್ಮಗ ಅಂತ ಹೇಳಿರಲಿಲ್ಲ. ಅವರು ಹೇಳಿದ್ದು, ಅಷ್ಟು ಮಾತ್ರ ಅವರಿಗೆ ನೆನಪಿಸಲು ಬಯಸುತ್ತೇನೆ. ಅವರ ಮಂತ್ರಿಗಳೆಲ್ಲ ಇಲ್ಲಿಯೇ ಬಿಡುಬಿಟ್ಟಿದ್ರು.

ಹಾನಗಲ್ ಜನರು ನನ್ನ ಗೌರವ ಉಳಿಸಿ ಅಂತ ಯಾರು ಕೇಳಿದ್ರು. ಅಲ್ಲದೇ ಸಿಎಂ ಬೊಮ್ಮಾಯಿ ಫಲಿತಾಂಶ ಬರುವ ಮುನ್ನೆವೇ ಹಾನಗಲ್ ನಲ್ಲಿ ಸೋಲೊಪ್ಪಿಕೊಂಡಿದ್ದರು ಎಂದು ಡಿಕೆಶಿ ವ್ಯಂಗ್ಯವಾಡಿದ್ರು.
ಇನ್ನೂ ಬಿಟ್ ಕಾಯಿನ್ ವಿಚಾರ, ಇಡಿ ಮತ್ತು CBIಗೆ ಕೊಟ್ಟಿದೀವಿ ಅಂತ ಹೇಳುತ್ತಾರೆ. ಅವರೇ ಅದರ ಬಗ್ಗೆ ವಿವರಣೆ ಕೊಡಬೇಕು. ನಾನು ಯಾವುದೇ ರಾಜಕಾರಣಿ ಬಗ್ಗೆ ಮಾತಾಡಿಲ್ಲ. ಪ್ರಕರಣ ತನಿಖೆ ಬಗ್ಗೆ ಸಾರ್ವಜನಿಕವಾಗಿ ಜನರಿಗೆ ಇಡಿ ಸ್ಪಷ್ಟಪಡಿಸಲಿ ಮತ್ತು CBIಗೆ ಬರೆದಿರುವ ಪತ್ರ ಬಹಿರಂಗ ಪಡಿಸಲಿ. ನಾವು ಸಹ ಆರ್‍ಟಿಐ ಮೂಲಕ ಅರ್ಜಿ ಸಲ್ಲಿಸಲಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ರು.

error: Content is protected !!