ವಿಜಯಪುರ: ತೀವ್ರ ಕುತೂಹಲ ಮೂಡಿಸಿರುವ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಇವತ್ತು ನಡೆಯುತ್ತಿದ್ದು, ೪,೦೩೧ ಮತಗಳ ಅಂತರದಲ್ಲಿ BJP ಮುನ್ನಡೆಯನ್ನು ಸಾಧಿಸಿದೆ. ೨ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದ್ದು, BJP ಅಭ್ಯರ್ಥಿ ರಮೇಶ್ ಭೂಸನೂರ ೯,೬೪೫ ಕಾಂಗ್ರೆಸ್ನ ಅಶೋಕ ಮನಗೂಳಿ ೫,೬೧೪ ಮತ್ತು JDSನ ಅಭ್ಯರ್ಥಿ ನಾಜಿಯಾ ಅಂಗಡಿ ೨೮೨ ಮತಗಳನ್ನು ಪಡೆದುಕೊಂಡಿದ್ದಾರೆ. ೧೬ ಟೇಬಲ್ನಲ್ಲಿ ೨೨ ಸುತ್ತು ಮತ ಎಣಿಕೆ ಕಾರ್ಯ ನಡೆಯುತ್ತಿದೆ.
೧ನೇ ಸುತ್ತಿನಲ್ಲಿ BJP ೫,೨೫೫, ಕಾಂಗ್ರೆಸ್ ೨,೦೫೪ ಮತ್ತು JDS ೭೩ ಮತಗಳನ್ನು ಪಡೆದಿತ್ತು. ಮುಂಜಾನೆ ೮ ಗಂಟೆಯಿಂದ ಮತ ಎಣಿಕೆ ಶುರುವಾಗಿದ್ದು, ಮಧ್ಯಾಹ್ನದ ಹೊತ್ತಿಗೆಲ್ಲಾ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. ವಿಜಯಪುರದ ಸೈನಿಕ ಶಾಲೆಯಲ್ಲಿ ಮತ ಎಣಿಕೆ ನಡೆಯುತ್ತಿದೆ. ಅಕ್ಟೋಬರ್ ೩೦ ರಂದು ನಡೆದ ಉಪ ಚುನಾವಣೆಯಲ್ಲಿ ಸಿಂದಗಿಯಲ್ಲಿ ಶೇಕಡಾ ೬೯. ೪೧ರಷ್ಟು ಮತದಾನ ನಡೆದಿತ್ತು. ಕಾಂಗ್ರೆಸ್ನ ಅಶೋಕ್ ಮನಗೂಳಿ, ಬಿಜೆಪಿಯ ರಮೇಶ್ ಭೂಸನೂರ, ಜೆಡಿಎಸ್ನ ನಾಜಿಯಾ ನಡುವೆ ತ್ರಿಕೋನ ಪೈಪೋಟಿ ಕಂಡು ಬಂದಿತ್ತು.