ರಾಯಚೂರು: ಜಿಲ್ಲೆಯನ್ನು ಕಡೆಗಣಿಸಲಾಗಿದೆ ಉತ್ತರ ಕರ್ನಾಟಕ ಎಂದ್ರೆ ಅದು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಕಲ್ಯಾಣ ಕರ್ನಾಟಕ ಎಂದ್ರೆ ಅದು ಕಲಬುರಗಿ, ಬೀದರ್ ಎನ್ನುವಂತಾಗಿದೆ. ಜಿಲ್ಲೆಯ ಅಭಿವೃದ್ಧಿಯು ಕುಂಠಿತವಾಗಿದೆ. ಹಾಗಾಗಿ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಬಿಡಿ ಎಂದು ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‍ಗೆ ಹೇಳಿರುವ ಮಾತು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಶಿವರಾಜ್ ಪಾಟೀಲ್ ಹೇಳಿಕೆಗೆ ತೆಲಂಗಾಣದ TRS ಕಾರ್ಯಾಧ್ಯಕ್ಷ K.T.R ಸ್ವಾಗತಿಸಿದ್ರು. ತೆಲಂಗಾಣದ ಅಭಿವೃದ್ಧಿಯನ್ನು ನೋಡಿ ಶಾಸಕ ಶಿವರಾಜ್ ಪಾಟೀಲ್ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಲು ಒತ್ತಾಯಿಸಿದ್ರು. ಇದನ್ನು ನಾವು ಸ್ವಾಗತಿಸುತ್ತೇವೆ ಎಂದು ಟ್ವೀಟ್ ಕೂಡ ಮಾಡಿದ್ದಾರೆ. ತಮ್ಮ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವುದರಿಂದ ಸ್ಪಷ್ಟನೆ ನೀಡಿರುವ ಶಾಸಕ ಡಾ.ಶಿವರಾಜ್ ಪಾಟೀಲ್ ರಾಯಚೂರು ಜಿಲ್ಲೆಯನ್ನು ನಿರ್ಲಕ್ಷಿಸಲಾಗುತ್ತಿದೆ.
ಹಾಗಾಗಿ ಆ ಮಾತು ಹೇಳಿದ್ದೆ. ನಾನು ಹುಟ್ಟಿರುವುದು ಕರ್ನಾಟಕದಲ್ಲೇ ಸಾಯುವುದು ಕರ್ನಾಟಕದಲ್ಲೇ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿ ಎಂದು ಆಕ್ರೋಶದಲ್ಲಿ ಹೇಳಿದ್ದೇ ಎಂದು ಶಿವರಾಜ್ ಪಾಟೀಲ್ ತಿಳಿಸಿದ್ರು. ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿಕೊಳ್ಳಲು ಅವರಿಗೆ ಆಸೆ ಇರಬಹುದು ನಾವು ಬಿಟ್ಟುಕೊಡಲ್ಲ. ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎನ್ನುವ ಸಿಟ್ಟಿನಲ್ಲಿ ಮಾತನಾಡಿದ್ದೇನೆ. ರಾಯಚೂರನ್ನು ಕಡೆಗಣಿಸುವುದು ಇನ್ನಾದ್ರು ನಿಲ್ಲಿಸಬೇಕು ಎಂಬುವುದು ನನ್ನ ಉದ್ದೇಶ ಎಂದು ಶಿವರಾಜ್ ಪಾಟೀಲ್ ಸ್ಪಷ್ಟನೆ ನೀಡಿದ್ರು.