ಕೂಗು ನಿಮ್ಮದು ಧ್ವನಿ ನಮ್ಮದು

ಇಬ್ರು BJP ಶಾಸಕರು ಬುಡಾ ಅಧ್ಯಕ್ಷರಿಗೆ ಸಹಕಾರ ಕೊಡುತ್ತಿಲ್ಲ: ಸತೀಶ್ ಜಾರಕಿಹೊಳಿ

ಬೆಳಗಾವಿ: ಬಿಜೆಪಿ ಇಬ್ರು ಶಾಸಕರು ಬುಡಾ ಅಧ್ಯಕ್ಷರಿಗೆ ಸಹಕಾರ ಕೊಡುತ್ತಿಲ್ಲ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಬುಡ ಸಭೆ ಮುಂದೂಡಲಾಗುತ್ತಿದೆ. ಈ ಬಗ್ಗೆ BJP ಶಾಸಕರು ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ರು. ಇವತ್ತು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರನ್ನು ಸಭೆ ಹೋಗಲು ಬಿಡುತ್ತಿಲ್ಲ. ನಾವು ಮಂಜೂರು ಮಾಡಿದ ಕೆಲಸಗಳು ಇನ್ನು ಪೆಂಡಿಂಗ್ ಇವೆ. ಬೆಳಗಾವಿ ಅಭಿವೃದ್ಧಿ ಕುಂಠಿತವಾಗಿದೆ. ಬೆಳಗಾವಿ ನಗರದಲ್ಲಿ ಅನುದಾನ, ಸಹಾಯಧನ,ಪ್ರೋತ್ಸಾಹ ಧನ,ಎಲ್ಲವೂ ಕಟ್ ಆಗಿದೆ. ಇದಕ್ಕೆ ಶಾಸಕರೇ ಪರಿಹಾರ ಕಂಡುಕೊಳ್ಳಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಮತ್ತು ಉಪ ಮೇಯರ್ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿಯವರು ಬೆಳಗಾವಿ ಮೇಯರ್ ಆಯ್ಕೆ ಆಗಲು ೧ ವರ್ಷ ಬೇಕು. ವ್ಯವಸ್ಥೆ ಹದಗೆಟ್ಟಿದೆ ಏನು ಮಾಡೋಕೆ ಆಗಲ್ಲ. ಅಧಿಕಾರ ಯಾರು ಮಾಡಬೇಕು ಅವರಿಗೆ ಸಿಗುತ್ತಿಲ್ಲ. ಬುಡಾದಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ಪಾಲಿಕೆ ಸದಸ್ಯರೆಲ್ಲ ಶಾಸಕರ ಸುತ್ತಲು ಸುತ್ತಬೇಕಷ್ಟೆ ಪಾಲಿಕೆಯಲ್ಲಿ ಹಿಂದೆಯೂ ಕೆಲವೇ ಜನ ಅಧಿಕಾರ ನಡೆಸಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.

error: Content is protected !!