ಕೂಗು ನಿಮ್ಮದು ಧ್ವನಿ ನಮ್ಮದು

ದೆಹಲಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಅರೆಸ್ಟ್, AK 47, ಮದ್ದು ಗುಂಡುಗಳು ವಶಕ್ಕೆ

ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕನನ್ನು ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಭಯೋತ್ಪಾದಕರು ನಕಲಿ ದಾಖಲೆಗಳನ್ನು ಹೊಂದಿದ್ದು, ದೆಹಲಿಯಲ್ಲಿ ವಾಸವಾಗಿದ್ದ. ಇದೀಗ ದೆಹಲಿಯ ಲಕ್ಷ್ಮೀನಗರ ಪ್ರದೇಶದಿಂದ ದೆಹಲಿಯ ವಿಶೇಷ ಸೆಲ್ ಪಾಕಿಸ್ತಾನಿ ಭಯೋತ್ಪಾದನನ್ನು ಸೆರೆಹಿಡಿದಿದ್ದಾರೆ. ಇದೀಗ ಆರೋಪಿಯಿಂದ AK 47 ಗನ್ ಹಾಗೂ ಅದರ ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಾರಿ ನವರಾತ್ರಿಯಲ್ಲಿ ನಡೆಯಬೇಕಿದ್ದ ಭೀಕರ ಭಯೋತ್ಪಾದ ದಾಳಿಯೊಂದು ತಪ್ಪಿದಂತಾಗಿದೆ. ಬಂಧಿತ ಪಾಕಿಸ್ತಾನಿ ಭಯೋತ್ಪಾದಕನನ್ನು ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಈತ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಯಾಗಿದ್ದಾನೆ. ಮೊಹಮ್ಮದ್ ಅಶ್ರಫ್ ದೆಹಲಿಯ ಶಾಸ್ತ್ರಿ ನಗರದಲ್ಲಿ ಅಲಿ ಅಹ್ಮದ್ ನೂರಿ ಹೆಸರಿನಲ್ಲಿ ವಾಸಿಸುತ್ತಿದ್ದನು. ವಿಚಾರಣೆ ವೇಳೆ, ಮೊಹಮ್ಮದ್ ಅಶ್ರಫ್ ಭಯೋತ್ಪಾದಕ ಸಂಘಟನೆ ISI ಜೊತೆ ಸಂಪರ್ಕ ಹೊಂದಿದ್ದು, ಹಲವು ದಿನಗಳ ಕಾಲ ಕಾಶ್ಮೀರದಲ್ಲಿ ಸಹ ತಂಗಿದ್ದ ವಿಚಾರವನ್ನು ಈತ ವಿಛಾರಣೆಯ ವೇಳೆ ತಿಳಿಸಿದ್ದಾನೆ. ಇದೀಗ ಪೊಲೀಸರು ಬಂಧಿತ ಭಯೋತ್ಪಾದಕನಿಂದ ೧ AK 47 ಗನ್ ದಾಳಿ ರೈಫಲ್ ಜೊತೆಗೆ ೧ ಹೆಚ್ಚುವರಿ ಮ್ಯಾಗಜೀನ್, ೧ ಹ್ಯಾಂಡ್ ಗ್ರೆನೇಡ್, ೫೦ ಸುತ್ತುಗಳಿರುವ ೨ ಅತ್ಯಾಧುನಿಕ ಪಿಸ್ತೂಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!