ಕೂಗು ನಿಮ್ಮದು ಧ್ವನಿ ನಮ್ಮದು

ಹಿರಿಯ ನಟ ಸತ್ಯಜಿತ್ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣ

ಬೆಂಗಳೂರು: ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಸತ್ಯಜಿತ್ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ಕಳೆದ ಆರು ದಿನಗಳಿಂದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬುಧವಾರದವರೆಗೂ ನಟನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿತ್ತು. ಆದ್ರೆ ಗುರುವಾರ ಡಯಾಲಿಸೀಸ್ ಮಾಡುವಾಗ ಹಾರ್ಟ್ ರೇಟ್ ಕಡಿಮೆಯಾಗಿದೆ. ಜೊತೆಗೆ ಇಂಟರ್ನಲ್ ಬ್ಲೀಡಿಂಗ್ ಕೂಡ ಆಗುತ್ತಿದೆ.

ಹಾಗಾಗಿ ಮತ್ತೆ ವೆಂಟಿಲೇಟರ್ ಸಪೋರ್ಟ್ ನೀಡಲಾಗಿದೆ. ಮೊನ್ನೆ ವರೆಗೂ ಸತ್ಯಜಿತ್ ಮಾತನಾಡುತ್ತಿದ್ರು, ಆದ್ರೆ ನಿನ್ನೆಯಿಂದ ಮತ್ತೆ ಆರೋಗ್ಯ ಕ್ಷೀಣಿಸಿದೆ. ಹಾಗಾಗಿ ಸ್ವಲ್ಪ ಚೇತರಿಸಿಕೊಂಡ ನಂತರ ಡಯಾಲಿಸೀಸ್ ಮಾಡಲು ವೈದ್ಯರು ತಿಳಿಸಿದ್ರು. ಎಂದು ಸತ್ಯಜಿತ್ ಪುತ್ರ ಆಕಾಶ್ ಮಾಹಿತಿ ನೀಡಿದ್ರು.

ಕೆಲವು ದಿನಗಳ ಹಿಂದೆಯೇ ಸತ್ಯಜಿತ್ ಅವರಿಗೆ ಜಾಂಡೀಸ್ ಆಗಿತ್ತು. ಈ ಬೆನ್ನಲ್ಲೇ ಹೃದಯಾಘಾತ ಸಹ ಸಂಭವಿಸಿತ್ತು. ಆಗ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ೨ ದಿನಗಳ ಬಳಿಕ ಸತ್ಯಜಿತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ರು. ತದನಂತರ ಮತ್ತೆ ನಟನ ಆರೋಗ್ಯ ಸ್ಥಿತಿ ಕ್ಷಿಣಿಸಿದೆ. ಹಾಗಾಗಿ ಬೌರಿಂಗ್ ಆಸ್ಪತ್ರೆಗೆ ಮತ್ತೆ ಭಾನುವಾರ ಸತ್ಯಜಿತ್‌ ಅನ್ನು ದಾಖಲಿಸಲಾಗಿದೆ.

ಈಗಾಗಲೇ ಗ್ಯಾಂಗ್ರಿನ್ ನಿಂದ ಎಡಗಾಲು ತೆಗೆಯಲಾಗಿದೆ. ಗ್ಯಾಂಗ್ರಿನ್ ಬಲಗಾಲಿಗೂ ಸ್ಪ್ರೆಡ್ ಆಗುತ್ತಿದ್ದು ತಕ್ಷಣ ICU ನಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿತ್ತು. ಬಿಪಿ ಹಾಗೂ ಶುಗರ್ ಏರುಪೇರಾಗುತ್ತಿದ್ದು, ವಯಸ್ಸು ೭೦ ದಾಟಿರುವ ಕಾರಣ ಸತ್ಯಜಿತ್ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಆದ್ರೆ ವೈದ್ಯರು ಪ್ರಯತ್ನವನ್ನು ಮುಂದುವರಿಸಿದ್ದಾರೆ ಎಂದು ಪುತ್ರ ಆಕಾಶ್ ಈ ಹಿಂದೆ ತಿಳಿಸಿದ್ರು.

error: Content is protected !!