ಬೆಂಗಳೂರು: ಶ್ರೀರಾಮ ಸೇವಾ ಮಂಡಳಿ ವತಿಯಿಂದ ಉಚಿತವಾಗಿ ೧೨೦ ದಿನಗಳಲ್ಲಿ ೨೫ ಸಾವಿರ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡಿದ ಸಲುವಾಗಿ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ರಾಜಾಜಿನಗರ ಶ್ರೀರಾಮಮಂದಿರದ ಹತ್ತಿರ ಇರುವ ಶ್ರೀರಾಮದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷರಾದ ಕೆ.ಎಸ್.ಶ್ರೀಧರ್, ನಿರ್ದೇಶಕರಾದ ಬಾಬುನರಸಿಂಹ, ಡಾ.ಸಿಂಧೂ, ಡಾ.ಪೂಜಾ ಹಾಗೂ ಆರೋಗ್ಯ ನಿರೀಕ್ಷಕರಾದ ಸುಬ್ರಮಣ್ಯ ಪದಕಿರವರು ಹಾಗೂ ಶ್ರೀರಾಮ ಸೇವಾ ಮಂಡಳಿ ಪದಾಧಿಕಾರಿಗಳು ಈ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ರು. ೨೫ಸಾವಿರ ಲಸಿಕೆ ಪಡೆದ ಫಲಾನುಭವಿಗಳಿಗೆ ಸನ್ಮಾನಿಸಿದ್ರು.
ಅಧ್ಯಕ್ಷ ಕೆ.ಎಸ್.ಶ್ರೀಧರ್ ಈ ಕುರಿತು ಮಾತನಾಡಿ, ಶ್ರೀರಾಮ ಸೇವಾ ಮಂಡಳಿ ಸಮಾಜಮುಖಿ ಕಾರ್ಯಗಳು ಹಾಗೂ ಜನರ ಸೇವೆ ಮಾಡುವಲ್ಲಿ ನಿರತವಾಗಿದೆ. ಕಳೆದ ಇಪ್ಪತ್ತು ತಿಂಗಳಿಂದ ಕೋವಿಡ್ ಎಂಬ ಮಹಾಮಾರಿ ಜನರ ಜೀವನವನ್ನು ತತ್ತರಗೊಳಿಸಿದೆ. ಆದ್ರೆ ಶ್ರೀರಾಮ ಸೇವಾ ಮಂಡಳಿ ಜನರ ಸಂಕಷ್ಟಕ್ಕೆ ನೆರವು ನೀಡಬೇಕೆಂದು ಕೋರೊನಾ ಮೊದಲನೆಯ ಹಾಗೂ ಎರಡನೇ ಅಲೆಯಲ್ಲಿ ೨೩ಸಾವಿರ ಆಹಾರ ಕಿಟ್ ವಿತರಿಸಲಾಯಿತು ಎಂದು ತಿಳಿಸಿದ್ರು.
ಸಾವಿರಾರು ಆಹಾರ ಕಿಟ್ಗಳನ್ನು ವಿತರಿಸಲಾಯಿತು. ಕೋವಿಡ್ ನಿಂದ ಉಸಿರಾಟದ ತೊಂದ್ರೆ ಇರುವವರಿಗೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ೧೧ ಆಕ್ಸಿಜನ್ ಸಾಂದ್ರಕಗಳನ್ನು ಉಚಿತವಾಗಿ ನೀಡಲಾಯಿತು. BBMP ಹಾಗೂ ಶ್ರೀರಾಮ ಸೇವಾ ಮಂಡಳಿ ಸಹಯೋಗದಲ್ಲಿ ೨೫ಸಾವಿರ ಕೋವಿಡ್ ೧೯ ಲಸಿಕೆಗಳನ್ನು ೧೨೦ ದಿನದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗಿದೆ. ಶ್ರೀರಾಮ ಸೇವಾ ಮಂಡಳಿ ಭಕ್ತರ ಸೇವೆಯ ಜೊತೆಯಲ್ಲಿ ಜನರ ಸೇವೆಗೆ ಸದಾ ಮುಂದೆ ಇರುತ್ತದೆ ಎಂದು ಹೇಳಿದ್ರು.