ಕೂಗು ನಿಮ್ಮದು ಧ್ವನಿ ನಮ್ಮದು

ಪ್ರವಾಹ ಸಂತ್ರಸ್ತರಿಗೆ ಸಿಕ್ಕಿಲ್ಲಪರಿಹಾರ, ಸಂತ್ರಸ್ಥರ ಧರಣಿ ಸತ್ಯಾಗ್ರಹ

ಚಿಕ್ಕೋಡಿ /ಬೆಳಗಾವಿ: ಪರಿಹಾರ ನೀಡುವಂತೆ ಆಗ್ರಹಿಸಿ ಕೃಷ್ಣಾ ನದಿ ತೀರದ ಪ್ರವಾಹ ಸಂತ್ರಸ್ಥರು ಇಂದು ಪ್ರತಿಭಟನೆ ನಡೆಸಿದ್ರು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಕೃಷ್ಣಾ ತೀರದ ಜುಗುಳ, ಮಂಗಾವತಿ, ಶಹಾಪುರ, ಮಳವಾಡ ಗ್ರಾಮಗಳ ಸಂತ್ರಸ್ಥರು, ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ರು.

ಪ್ರವಾಹ ಬಂದು ಹೋಗಿ ೩ ತಿಂಗಳು ಕಳೆದ್ರು ಸರ್ಕಾರ ಸಂತ್ರಸ್ಥರಿಗೆ ಇನ್ನೂ ಪರಿಹಾರ ನೀಡಿಲ್ಲ. ಪ್ರವಾಹ ಬಂದಾಗ ಮನೆಗಳನ್ನು ಕಳೆದುಕೊಂಡಿದ್ದೇವೆ. ಆದ್ರೆ ಇದು ವರೆಗೂ ಸರ್ಕಾರದ ಪರಿಹಾರ ಬಂದಿಲ್ಲ. ಬೆಳೆ ಹಾನಿ ಪರಿಹಾರ ಸೇರಿದಂತೆ ಸರ್ಕಾರ ಘೋಷಿಸಿರುವ ಯಾವೊಂದು ಪರಿಹಾರ ಸಂತ್ರಸ್ಥರಿಗೆ ಸಿಕ್ಕಿಲ್ಲ.

ಅಲ್ಲದೆ ಮನೆ ಮಂಜೂರು ಮಾಡುವಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು. ಲಾಗಿನ್ ಶುರು ಇದ್ರು ಮನೆಗಳ ಮಂಜುರಾತಿಗೆ ತಾಲೂಕು ಆಡಳಿತ ಮುಂದಾಗಿಲ್ಲ. ಹೀಗಾಗಿ ತಕ್ಷಣವೇ ಸರ್ಕಾರ ಸಂತ್ರಸ್ಥರಿಗೆ ಪರಿಹಾರ ನೀಡಬೇಕು. ಇಲ್ಲದಿದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ರು.

error: Content is protected !!