ಕೂಗು ನಿಮ್ಮದು ಧ್ವನಿ ನಮ್ಮದು

ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್‍ಗೆ ಸಂಘದಲ್ಲಿಯೇ ಟ್ರೇನಿಂಗ್ ನೀಡಲಾಗುತ್ತಿದೆಯೇ?: ಕಟೀಲ್‍ಗೆ ಹೆಚ್.ಕೆ.ಕುಮಾರಸ್ವಾಮಿ ಪ್ರಶ್ನೆ?

ಬೆಂಗಳೂರು: ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್‍ಗೆ ಸಂಘದಲ್ಲಿಯೇ ತರಬೇತಿ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸುವ ಮೂಲಕ BJP ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ಹೆಚ್.ಕೆ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್‍.ಡಿ ಕುಮಾರಸ್ವಾಮಿ ಪರವಾಗಿ, BJP ನಾಯಕರ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ಹೆಚ್.ಕೆ.ಕುಮಾರಸ್ವಾಮಿ RSS ಬಗ್ಗೆ ನೀಡಿದ ಹೇಳಿಕೆಯಿಂದ ನೀವೆಲ್ಲರೂ ಮೈಪರಚಿಕೊಳ್ಳುತ್ತಿರುವುದು ನೋಡಿದ್ರೆ ಸತ್ಯ ಎಷ್ಟು ಕಹಿಯಾಗಿರುತ್ತದೆ ಎಂಬುದು ಅರ್ಥವಾಗುತ್ತದೆ.

ಕಟೀಲ್ ಟೀಕೆ ಮಾಡುವ ಭರದಲ್ಲಿ ‘ಫ್ಯಾಮಿಲಿ ಬ್ಯುಸಿನೆಸ್’ ಬಗ್ಗೆ ಹೇಳಿದ್ದಾರೆ. ಆದ್ರೆ ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್ ಗೆ ಸಂಘದಲ್ಲಿಯೇ ತರಬೇತಿ ನೀಡಲಾಗುತ್ತಿದೆಯೇ? ಎಂದು ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಆಪರೇಷನ್ ಕಮಲದ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಮಾಜಿ ಸಿಎಂ ಯಡಿಯೂರಪ್ಪ ಸಿಎಂ ಹುದ್ದೆಯನ್ನು ಕಣ್ಣೀರಿಡುತ್ತಲೇ ಕಳೆದುಕೊಂಡ್ರು ಏಕೆ? ಅದು ಫ್ಯಾಮಿಲಿ ಬ್ಯುಸಿನೆಸ್ ನಿಂದ ಅಲ್ಲವೇ? ನಿಮ್ಮ ಪಕ್ಷದ ಶಾಸಕರೇ ಹಾದಿ ಬೀದಿಯಲ್ಲಿ ನಿಂತು ನಿಮ್ಮ ಸಿಎಂ ‘ಫ್ಯಾಮಿಲಿ ಬ್ಯುಸಿನೆಸ್’ ಬಗ್ಗೆ ಟೀಕೆ ಮಾಡಿದ್ದನ್ನು ಮರೆತುಬಿಟ್ಟಿರಾ ಕಟೀಲ್ ಅವರೇ? ಅನುಗ್ರಹದ ಹಿತ್ತಲಿನಲ್ಲಿ ನಡೆದ ವ್ಯವಹಾರಗಳ ಬಗ್ಗೆ ಹೇಳಲಿಲ್ಲವೇ? ಎಂದು ಹೆಚ್.ಕೆ.ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.

IAS, IPS ಅಭ್ಯರ್ಥಿಗಳಿಗೆ ತರಬೇತಿ ಕೊಡುತ್ತಿದ್ದೇವೆ ಎಂದು ಹೇಳುತ್ತಿದ್ದೀರಿ, ಸರಿ ಸಂಘದ ಸ್ವಯಂ ಸೇವಕರು ದೇಶ ಸೇವೆ ಮಾಡುತ್ತಿದ್ದಾರೆ ಎನ್ನುತ್ತೀರಿ. ಹಾಗಾದ್ರೆ ಎಲ್ಲರನ್ನೂ ಗಡಿಗೆ ಕಳಿಸಿ. ಗಡಿಯಲ್ಲಿ ಈಗ ಉದ್ವಿಗ್ನ ಪರಿಸ್ಥಿತಿ ಇದೆ. ಕಟೀಲ್ ಅವರೇ ಸುಖಾಸುಮ್ಮನೆ ಮಾತನಾಡುವುದಲ್ಲ, ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಕಳೆದ ೨ ದಿನಗಳ ಹಿಂದೆ RSS ವಿರುದ್ಧ ಹೆಚ್‍.ಡಿ.ಕೆ ಹೇಳಿಕೆ ನೀಡಿದ್ದು, ಆ ಬಳಿಕ ರಾಜ್ಯದಲ್ಲಿ RSS ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ರಾಜಕೀಯ ನಾಯಕರು ತಮಗೆ ತೋಚಿದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.

error: Content is protected !!