ದುಬೈ: T20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ರಣರೋಚಕ ಪಂದ್ಯ ವೀಕ್ಷಿಸಲು ಪ್ರತಿ ಬಾರಿಯೂ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಅದೇ ರೀತಿ ಈ ಬಾರಿಯು ಕೂಡ ವೀಕ್ಷಕರು ಮುಗಿಬಿದ್ದು ಟಿಕೆಟ್ ಖರೀದಿ ಮಾಡಿದ್ದಾರೆ. ಟಿಕೆಟ್ ಬುಕ್ಕಿಂಗ್ ಅವಕಾಶ ಸಿಕ್ಕ ಕೆಲವೇ ನಿಮಿಷಗಳಲ್ಲಿ ಎಲ್ಲ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿವೆ. ಈ ಬಾರಿಯ ವಿಶ್ವಕಪ್ ಪಂದ್ಯಾವಳಿ UAE ನಲ್ಲಿ ನಡೆಯುತ್ತಿದೆ.
೨೦೧೯ರ ವಿಶ್ವಕಪ್ ನಂತರ ೨ ಈ ತಂಡಗಳು ಮುಖಾಮುಖಿಯಾಗುತ್ತಿದ್ದು, ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಭಾರತ ಮತ್ತು ಪಾಕಿಸ್ಥಾನ ಗ್ರೂಪ್ ೨ನಲ್ಲಿ ಮುಖಾಮುಖಿಯಾಗುತ್ತಿದ್ದು, ಅಕ್ಟೋಬರ್ ೨೪ರಂದು ದುಬೈ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಟಿಕೆಟ್ ಸೋಲ್ಡ್ ಔಟ್ ಆಗಿರುವ ಕುರಿತು ಎಲ್ಲಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜನರಲ್, ಜನರಲ್ ಈಸ್ಟ್, ಪ್ರೀಮಿಯಂ, ಪೆವಿಲಿಯನ್ ಈಸ್ಟ್ ಮತ್ತು ಪ್ಲಾಟಿನಂ ಎಲ್ಲ ರೀತಿಯ ಟಿಕೆಟ್ ಬುಕ್ ಆಗಿವೆ ಎಂದು ಹೇಳಿದೆ.
ಜೊತೆಗೆ ಟಿಕೆಟ್ ಬುಕ್ ಮಾಡಲು ಪ್ಲಾಟಿನಂ ಲಿಸ್ಟ್ ವೆಬ್‍ಸೈಟ್ ಓಪನ್ ಆಗುತ್ತಿಲ್ಲ ಎಂದು ವರದಿ ಮಾಡಿದೆ. T20 ವಿಶ್ವಕಪ್‍ನ ಟಿಕೆಟ್‍ಗಳನ್ನು ಬುಕ್ ಮಾಡಲು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅವಕಾಶ ನೀಡಿದ್ದೇ ತಡ, ಸಾವಿರಾರು ಕ್ರಿಕೆಟ್ ಅಭಿಮಾನಿಗಳು ವೆಬ್‍ಸೈಟ್‍ಗೆ ಮುಗಿಬಿದ್ದು, ತಮ್ಮ ಸೀಟ್‍ಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ 10 ಸಾವಿರ ಜನ ಒಂದು ಗಂಟೆಗೂ ಅಧಿಕ ಕಾಲ ಆನ್‍ಲೈನ್ ಕ್ಯೂನಲ್ಲಿ ಕಾದಿದ್ದಾರೆ.
ಭಾನುವಾರ ರಾತ್ರಿ ಪ್ರೀಮಿಯಂ ಟಿಕೆಟ್ ಬೆಲೆ ೩೦,೪೩೧ ರೂಪಾಯಿ ಇದ್ರೆ, ಪ್ಲಾಟಿನಂ ಟಿಕೆಟ್ ಬೆಲೆ ೫೨,೭೪೫ ರೂಪಾಯಿ ಇತ್ತು. ಆದ್ರೆ ಸೋಮವಾರ ಮುಂಜಾನೆ ಪ್ಲಾಟಿನಂ ಲಿಸ್ಟ್ ವೆಬ್‍ಸೈಟ್ ನಲ್ಲಿ ಯಾವುದೇ ಟಿಕೆಟ್ ಲಭ್ಯವಿರಲಿಲ್ಲ.