ಕೂಗು ನಿಮ್ಮದು ಧ್ವನಿ ನಮ್ಮದು

ಚಾಮುಂಡಿ ತಾಯಿಯ ಭಕ್ತರಿಗಿಲ್ಲ ಅಮ್ಮನವರ ದರ್ಶನ ಮೂರು ದಿನ ಪ್ರವೇಶಕ್ಕೆ ನಿರ್ಬಂಧ

ಮೈಸೂರು: ನಾಳೆ ಮಹಾಲಯ ಅಮವಾಸ್ಯೆಯಾಗಿದೆ. ಚಾಮುಂಡಿ ಬೆಟ್ಟಕ್ಕೆ ಹೋಗಬೇಕು ಎಂದು ನೀವ್ ಏನಾದ್ರೂ ಅಂದುಕೊಂಡಿದ್ರೆ ನಿರಾಸೆ ಉಂಟಾಗಲಿದೆ. ೩ ದಿನ ಚಾಮುಂಡಿ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧವನ್ನು ಹೇರಲಾಗಿದೆ. ಈ ಬರು ಗುರುವಾರ ನಾಡ ಹಬ್ಬ ದಸರಾ ಹಬ್ಬವನ್ನು ಮಾಡಲಾಗುತ್ತದೆ. ಹಾಗಾಗಿ ಈ ಹಿನ್ನಲೆಯಲ್ಲಿ ೩ ದಿನಗಳ ಕಾಲ ಚಾಮುಂಡಿ ದೇವಿ ದರ್ಶನಕ್ಕೆ ಭಕ್ತಾದಿಗಳಿಗೆ ನಿರ್ಬಂಧವನ್ನು ಹೇರಲಾಗಿದೆ.

ಇವತ್ತು, ಮತ್ತು ನಾಳೆ ಹಾಗೂ ನಾಡಿದ್ದು ಒಟ್ಟು ೩ ದಿನಗಳ ಕಾಲ ದೇವಿಯ ದರ್ಶನಕ್ಕೆ ಭಕ್ತಾಧಿಗಳಿಗೆ ನಿರ್ಬಂಧವನ್ನು ಜಿಲ್ಲಾಡಳಿತ ಹೇರಿದೆ. ಕೋರೊನಾ ನಿರ್ಬಂಧ ಕಾರಣವನ್ನು ಕೂಡ ಜಿಲ್ಲಾಡಿತದ ಆದೇಶದಲ್ಲಿ ಹೇಳಲಾಗಿದೆ. ಚಾಮುಂಡಿ ದೇವಿ ಬೆಟ್ಟಕ್ಕೆ ಹೋಗಬೇಕು ಎಂದ್ದಂತವರಿಗೆ ನಿರಾಸೆ ಉಂಟಾಗಲಿದೆ. ಕೋವಿಡ್ ನಿರ್ಭಂದಗಳಿರುವುದರಿಂದ ಮಂದಿ ಬಹಳ ಸಂಖ್ಯೆಯಲ್ಲಿ ಸೇರಿ ಬಿಟ್ರೆ ತೊಂದರೆಯಾಗುತ್ತದೆ. ಇದರಿಂದ ದಸರಾ ಉದ್ಘಾಟನೆಯ ಸಿದ್ಧತೆಗೆ ತೊಂದರೆಯಾಗುತ್ತದೆ. ಎನ್ನುವ ಕಾರಣದಿಂದಾಗಿ ಚಾಮುಂಡಿ ತಾಯಿಯ ಪ್ರವೇಶಕ್ಕೆ ನಿರ್ಭಂಧವನ್ನು ಹೇರಲಾಗಿದೆ.

error: Content is protected !!