ಬೆಂಗಳೂರು: ತಿಗಳರಪಾಳ್ಯದ ಒಂದೇ ಕುಟುಂಬದ ನಾಲ್ಕು ಜನರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಮಗ ಮಧುಸಾಗರ್ ನಿಂದಲೇ ತಂದೆ ಶಂಕರ್ ಕೊಲೆಗೆ ಸ್ಕೆಚ್ ನಡೆದಿತ್ತು ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಹೌದು. ಮಧುಸಾಗರ್ ಮತ್ತು ಶಂಕರ್ ಫೈಟ್ಗೆ ಮತ್ತೊಂದು ಟ್ವಿಸ್ಟ್ ದೊರೆತಿದೆ. ಆತ್ಮಹತ್ಯೆಗೂ ಮುಂಚೆ ನಾಲ್ಕು ಜನ ಡೆತ್ ನೋಟ್ ಬರೆದಿದ್ರು. ಸದ್ಯ ಡೆತ್ ನೋಟ್ ಅಲ್ಲಿರುವ ವಿಚಾರಗಳು ಒಂದೊಂದಾಗಿಯೇ ಹೊರ ಬೀಳುತ್ತಿವೆ.
ತಂದೆ ಶಂಕರ್ ಕೊಲೆಗೆ ಮಗ ಮಧುಸಾಗರ್ ಸ್ಕೆಚ್ ಹಾಕಿದ್ದ ಎಂಬುದು ಸದ್ಯದ ಮಾಹಿತಿಯಾಗಿದೆ. ತನ್ನನ್ನು ಕೊಲೆ ಮಾಡಲು ಮಗ ಸ್ಕೆಚ್ ಹಾಕಿರುವ ವಿಚಾರವನ್ನು ಸ್ವತಃ ಶಂಕರ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಸದ್ಯ ಶಂಕರ್ ಕೊಟ್ಟ ಈ ಮಾಹಿತಿಗೂ, ಸಿಕ್ಕ ಟೆಕ್ನಿಕಲ್ ಸಾಕ್ಷಿಗೂ ಮ್ಯಾಚ್ ಆಗುತ್ತಿರುವುದಾಗಿ ತಿಳಿದುಬಂದಿದೆ.
ಇನ್ನೂ ಸೆಪ್ಟೆಂಬರ್ ೧೨ ರಂದು ಹತ್ತು ಲಕ್ಷ ರೂಪಾಯಿ ಕೋಡುತ್ತೇನೆ ಬಾ ಎಂದು ಮಗ ಶಂಕರ್ ಗೆ ಮೆಸೇಜ್ ಹಾಕಿದ್ದ. ಮೆಸೇಜ್ಗೆ ರಿಪ್ಲೈ ಮಾಡದಿದ್ದಾಗ ಮಧುಸಾಗರ್ ತನ್ನ ತಂದೆಗೆ ಮೂರು ಬಾರಿ ಕಾಲ್ ಮಾಡಿದ್ದ. ಕೊನೆ ಕರೆ ವೇಳೆ ಕೊಲೆ ಮಾಡುವುದಾಗಿ ಬೆದರಿಸಿದ್ದ. ಅಮ್ಮ, ಅಕ್ಕಂದಿರು ಹೋದ ಮೇಲೆ ಅಪ್ಪನನ್ನು ಬಿಡೋದ್ ಬೇಡ ಅಂತ ತೀರ್ಮಾನಿಸಿದ್ದ. ಮಗನ ಮಾತು ನಂಬಿ ನಾನು ಮನೆಗೆ ಹೋದ್ರೆ ಅಂದೇ ಕೊಲೆ ಆಗುತ್ತಿದ್ದೆ ಎಂದು ಹಲ್ಲೇಗೆರೆ ಶಂಕರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.