ಕೂಗು ನಿಮ್ಮದು ಧ್ವನಿ ನಮ್ಮದು

ಪಕ್ಷಿಗಳಿಗೆ ಪುನರ್ಜನ್ಮ ಕೊಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

ರಾಯಚೂರು: ಮಾನ್ವಿ ಪಟ್ಟಣದ ಪಕ್ಷಿ ಪ್ರೇಮಿ ಪಬ್ಲಿಕ್ ಹೀರೋ ಸಲ್ಲಾವುದ್ದೀನ್ ಗಾಯಗೊಂಡಿದ್ದ ನವಿಲೊಂದನ್ನ ತಮ್ಮ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡಿ ಪುನಃ ಕಾಡಿಗೆ ಬಿಡುವ ಮೂಲಕ ಪಕ್ಷಿ ಪ್ರೇಮ ಮೆರೆದಿದ್ದಾರೆ. ಪಕ್ಷಿಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದ ಸಲ್ಲಾವುದ್ದೀನ್ ಈಗ ನವಿಲೊಂದಕ್ಕೆ ಪುನರ್ ಜನ್ಮ ಕೊಟ್ಟಿದ್ದಾರೆ.

ಸೆಪ್ಟೆಂಬರ್ ೨೬ ರಂದು ಮಾನ್ವಿ ತಾಲೂಕಿನ ಬಾಪೂರಿನ ಜಮೀನ ಒಂದರಲ್ಲಿ ಅನಾರೋಗ್ಯದಿಂದ ಬಿದ್ದಿದ್ದ ನವಿಲನ್ನು ಸ್ಥಳೀಯರಾದ ಫಯಾಜ್ ರುಮಾಲ್ ವಾಲೆ ಮತ್ತು ಅವರ ಸ್ನೇಹಿತ ಸಲ್ಲಾವುದ್ದೀನ್ ಅವರಿಗೆ ತಂದು ಒಪ್ಪಿಸಿದ್ದಾರೆ. ನಂತರ ಅರಣ್ಯಾಧಿಕಾರಿ ರಾಜೇಶ್ ನಾಯಕ್‍ಗೆ ಮಾಹಿತಿ ಕೊಟ್ಟು ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿ ನಂತರ ಆರೈಕೆ ಶುರು ಮಾಡಿದ್ರು.

ಪಕ್ಷಿಧಾಮದಂತೆ ಮಾಡಿಕೊಂಡಿರುವ ತಮ್ಮ ಮನೆಯಲ್ಲಿ ಕೋಳಿಗಳ ಜೊತೆ ನವಿಲನ್ನು ಬಿಟ್ಟು ಆರೈಕೆ ಮಾಡಿದ್ದಾರೆ. ಮತ್ತು ಚಿಕಿತ್ಸೆಯನ್ನೂ ಕೊಡಿಸಿ ಗುಣಮುಖ ಮಾಡಿದ್ದಾರೆ. ಈಗ ನವಿಲು ಸಂಪೂರ್ಣ ಗುಣಮುಖವಾದ ಹಿನ್ನೆಲೆ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ಆ ನವಿಲನ್ನು ಪುನಃ ಕಾಡಿಗೆ ಬಿಡಲಾಗಿದೆ. ಈ ರೀತಿ ಎಲ್ಲೇ ಪಕ್ಷಿಗಳು ಗಾಯಗೊಂಡು ಬಿದ್ದಿದ್ರು ಜನ ಸಲ್ಲಾವುದ್ದೀನ್ ಬಳಿ ತರುತ್ತಾರೆ. ಅವುಗಳಿಗೆ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಿ ಪುನಃ ಕೆಲಸದಲ್ಲಿ ನಿರತರಾಗಿದ್ದಾರೆ. ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಸಲಾವುದ್ದೀನ್ ಪಕ್ಷಿಪ್ರೇಮ ಕುರಿತು ಈ ಹಿಂದೆಯೇ ಮಾದ್ಯಮವೊಂದರಲ್ಲಿ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಲಾಗಿತ್ತು.

error: Content is protected !!