ಕೂಗು ನಿಮ್ಮದು ಧ್ವನಿ ನಮ್ಮದು

ವಿದ್ಯಾಕಾಶಿಯಲ್ಲಿ ಒಂದು ವಾರದಲ್ಲಿ 2 ಬಾರ್‌ನಲ್ಲಿ ಕಳ್ಳತನ

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಒಂದು ವಾರದಲ್ಲಿ ೨ ಬಾರ್‌ನಲ್ಲಿ ಕಳ್ಳತನದ ಘಟನೆ ನಡೆದಿದೆ. ಕಳೆದ ೩ ದಿನಗಳ ಹಿಂದೆಯಷ್ಟೇ ನಗರದ ತೇಜಸ್ವಿನಗರದಲ್ಲಿ M.S.I.L ನಲ್ಲಿ ಕಳ್ಳತನ ಮಾಡಿದ್ರು. M.S.I.L ನಲ್ಲಿದ್ದ ೬೫ಸಾವಿರ ನಗದು ಮತ್ತು ಮದ್ಯದ ಬಾಟಲೆಗಳನ್ನು ಕಳ್ಳತನ ಮಾಡಿದ್ದಾರೆ.

ಇದೀಗ ಮತ್ತೇ ಧಾರವಾಡ ನಗರದ ಸಪ್ತಾಪೂರದಲ್ಲಿ ತ್ರಿವೇಣಿ ಎಂಬ ಬಾರ್ ನಲ್ಲಿಯೂ ಕಳ್ಳತನ ಮಾಡಲಾಗಿದೆ. ಬಾರ್ ನ ಶಟರ್ ಒಡೆದು ಚಾಲಾಕಿ ಕಳ್ಳರು ತಮ್ಮ ಕೈಚಳಕ ತೋರಿಸಿ, ಬಾರ್ ನಲ್ಲಿದ್ದ ಬಾಟಲ್, ಮತ್ತು ನಗದು ಹಣದ ಜೊತೆಗೆ ಸಿಸಿಟಿವಿ ಡಿವಿಆರ್ ಅನ್ನು ಕದ್ದು ಪರಾರಿಯಾಗಿದ್ದಾರೆ. ಕ್ಯಾಮೆರಾಗಳನ್ನು ಡ್ಯಾಮೆಜ್ ಮಾಡಿರುವ ಕಳ್ಳರು, ಬಾರ್ ಕೌಂಟರ್ ನಲ್ಲಿದ್ದ ೪೦ ಸಾವಿರಕ್ಕೂ ಹೆಚ್ಚು ಹಣ ಮತ್ತು ಮದ್ಯದ ಬಾಟಲ್ ಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

error: Content is protected !!