ತಿರುವನಂತಪುರ: ಕೇರಳದ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಟ್ರಸ್ಟ್ ೨೫ ವರ್ಷಗಳ ಆಡಿಟ್ ರಿಪೋರ್ಟ್ ಕೋರ್ಟ್ಗೆ ಸಲ್ಲಿಕೆಯಿಂದ ವಿನಾಯಿತಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದ್ರೆ ಸುಪ್ರೀಂಕೊರ್ಟ್ನಲ್ಲಿ ಟ್ರಸ್ಟ್ಗೆ ಹಿನ್ನಡೆ ಉಂಟಾಗಿದೆ. ಕೋರ್ಟ್ ಆಡಿಟ್ ರಿಪೋರ್ಟ್ ಸಲ್ಲಿಕೆಗೆ ಗಡುವು ನೀಡಿದೆ. ಕೆಲ ದಿನಗಳ ಹಿಂದೆಯೇ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಟ್ರಸ್ಟ್ ೨೫ ವರ್ಷಗಳ ಆಡಿಟ್ ರಿಪೋರ್ಟ್ನ್ನು ಕೋರ್ಟ್ಗೆ ಸಲ್ಲಿಸುವಂತೆ ಆದೇಶ ಇತ್ತು, ಇದನ್ನು ಇದೀಗ ಕೊಡಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಈ ಆಡಿಟ್ ರಿಪೋರ್ಟ್ನಿಂದ ನಮಗೆ ವಿನಾಯಿತಿ ಕೊಡಿ ಎಂದು ಅನಂತ್ ಪದ್ಮನಾಭ ದೇವಾಲಯದ ಟ್ರಸ್ಟ್ ಸುಪ್ರೀಂಕೋಟ್ಗೆ ಅರ್ಜಿ ಸಲ್ಲಿಸಿತು.
ಇನ್ನೂ ಈ ಅರ್ಜಿಯನ್ನು ವಿಚಾರಿಸಿದ ಸುಪ್ರೀಂಕೋರ್ಟ್ ಅರ್ಜಿ ವಜಾ ಮಾಡಿ, ವಿನಾಯಿತಿ ನೀಡಲು ಸಾಧ್ಯವಿಲ್ಲ ಎನ್ನುವ ಮೂಲಕ ಟ್ರಸ್ಟ್ಗೆ ಹಿನ್ನಡೆಯನ್ನುಂಟುಮಾಡಿದೆ. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ದೇವಸ್ಥಾನ ಸೇರಿದಂತೆ ಟ್ರಸ್ಟ್ನ ವ್ಯವಹಾರಗಳ ಆಡಿಟ್ ರಿಪೋರ್ಟ್ ಸಲ್ಲಿಕೆಗೆ ಸೂಚನೆಯನ್ನು ನೀಡಿದ್ದು, ೩ ತಿಂಗಳ ಅವಧಿಯಲ್ಲಿ ೨೫ ವರ್ಷಗಳ ಆಡಿಟ್ ರಿಪೋರ್ಟ್ ಸಲ್ಲಿಸುವಂತೆ ಸೂಚಿಸಿದೆ. ಕೇರಳದಲ್ಲಿ ಕೋವಿಡ್ನಿಂದಾಗಿ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಬಾಗಿಲುಗಳನ್ನು ಮುಚ್ಚಿತ್ತು. ನಂತರ ಆಗಸ್ಟ್ನಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.