ಬೆಂಗಳೂರು: ದಿವಂಗತ ನಟ ಅಂಬರೀಶ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇದ್ರ ಸಿಂಗ ಧೋನಿಗೆ ಹಣವನ್ನು ನೀಡಿದ್ದಾರೆ ಎಂಬ ಮಾಹಿತಿಯನ್ನು ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.
ಹೌದು ಕಲಿಯುಗದ ಕರ್ಣ ಎಂದೇ ಹೆಸರು ಪಡೆದಿದ್ದ ರೆಬಲ್ ಸ್ಟಾರ್ ಅಂಬರೀಶ್ ಕಷ್ಟ ಎಂದು ಮನೆಯ ಬಾಗಿಲಿಗೆ ಬಂದ ಜನರನ್ನು ಖಾಲಿ ಕೈಯಲ್ಲಿ ಕಳುಹಿಸದೇ ಅನೇಕ ಜನರಿಗೆ ಸಹಾಯವನ್ನು ಮಾಡಿದ್ದಾರೆ.
ಅಲ್ಲದೇ ಸೆಲಿಬ್ರೇಟಿಗಳ ನಡುವೆ ಯಾವುದೇ ಮನಸ್ತಾಪವಿದ್ರು ಸಹ ಅಂಬರೀಶ್ ಅವರೇ ಸಂಧಾನ ಮಾಡುವುದರ ಮೂಕಾಂತರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ರು. ಸದ್ಯ ರೆಬಲ್ ಸ್ಟಾರ್ ಅಂಬರೀಶ್ ಒಂದು ಕಾಲದಲ್ಲಿ ಕೂಲ್ ಕ್ಯಾಪ್ಟನ್ ಆಗಿದ್ದ M.S ಧೋನಿಗೆ ಎರಡು ಲಕ್ಷ ರೂಪಾಯಿ ಹಣವನ್ನು ನೀಡಿರುವ ವಿಚಾರವನ್ನು ಸುಮಲತಾ ಅಂಬರೀಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂಬರೀಶ್ ಮಾಡಿದ ಮಾನವೀಯ ಕಾರ್ಯಗಳ ಬಗ್ಗೆ ಯಾರಿಗೂ ಅಷ್ಟು ಗೊತ್ತಿಲ್ಲಾ. ಏಕೆಂದರೆ ಅಂಬರೀಶ್ ಮಾಡುವ ದಾನದ ಬಗ್ಗೆ ಅವರು ಎಲ್ಲಿಯೂ ಪ್ರಚಾರವನ್ನು ಮಾಡಿಕೊಳ್ಳುತ್ತಿರಲಿಲ್ಲ. ಅನಿರೀಕ್ಷಿತವಾಗಿ ಈ ವಿಚಾರದ ಬಗ್ಗೆ ನಾನು ತಿಳಿದಾಗ ನನಗೆ ಆರ್ಶ್ಚಯವಾಗುತ್ತದೆ. ಆದ್ರು ಕೂಡಾ ಅದರಲ್ಲಿ ಯಾವುದೇ ತರಹದ ಅಚ್ಚರಿಯಿಲ್ಲ. ಅಂಬರೀಶ್ ಅವರನ್ನು ಪ್ರೀತಿಸುವ ಜನರೇ ಅವರನ್ನು ಕಲಿಯುಗದ ಕರ್ಣ ಎಂದು ಕರೆಯುತ್ತಿದ್ದರು ಎಂದು ಕ್ಯಾಪ್ಷನ್ ನಲ್ಲಿ ಕೂಡ ಬರೆದುಕೊಂಡಿದ್ದಾರೆ.
೨೦೧೪ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ಮಧ್ಯೆ ಏಕದಿನದ ಪಂದ್ಯ ನಡೆದಿತ್ತು. ಈ ಸಮಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಮಹೇದ್ರ ಸಿಂಗ ಧೋನಿ ಆಟವನ್ನು ನೋಡಿ ರೆಬಲ್ ಸ್ಟಾರ್ ಅಂಬರೀಶ್ ಮನಸೋತಿದ್ರು. ಜೊತೆಗೆ M.S ಧೋನಿಯ ಕಷ್ಟವನ್ನು ತಿಳಿದು ಅವರಿಗೆ ಎರಡು ಲಕ್ಷ ರೂಪಾಯಿ. ಹಣವನ್ನು ಸಹಾಯ ಮಾಡಿದ್ದರು ಎಂಬ ಸತ್ಯ ಇದೀಗ ತಿಳಿದು ಬಂದಿದೆ.