ಬೆಂಗಳೂರು: ಸೆಪ್ಟೆಂಬರ್ ೧೩ ರಿಂದ ಸೆಪ್ಟೆಂಬರ್ ೨೪ರವರೆಗೆ ವಿಧಾನಮಂಡಲದ ಅಧಿವೇಶನವು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ರು.
ಸಂಪುಟ ಸಭೆ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಸಂಪುಟ ಪುನರ್ ರಚನೆ ಆಗಿದೆ. ಹೀಗಾಗಿ ಸಂಪುಟ ಉಪಸಮಿತಿಗಳ ಪುನರ್ ರಚನೆಗೆ ನಿರ್ಧಾರ ಮಾಡಲಾಗಿದೆ. ಇನ್ನೂ ಮಾನಸಿಕ ಆರೋಗ್ಯ ಆರೈಕೆಯ ನಿಯಮವನ್ನು ೨೦೨೩ಕ್ಕೆ ಅನುಮೋದನೆ ನೀಡಲಾಗಿದೆ. ೨೦೨೦ ಹಾಗೂ ೨೦೨೧ ನೇ ಸಾಲಿನ ಸರ್ಕಾರಿ ಮತ್ತು ಅನುದಾನಿತ ಶಾಲಾ, ಕಾಲೇಜುಗಳ ಹೆಣ್ಣುಮಕ್ಕಳಿಗೆ ಶುಚಿ ಕಾರ್ಯಕ್ರಮ ಒಂದು ಹೆಣ್ಣುಮಗುವಿಗೆ ೧೦ ಪ್ಯಾಡ್ ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ರು.
ರಾಜ್ಯದಲ್ಲಿನ ೨,೮೫೯ ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಹಾಗೂ ಕ್ಷೇಮ ಕೇಂದ್ರಗಳನ್ನಾಗಿ ಉನ್ನತೀಕರಣಕ್ಕಾಗಿ ೪೭೮.೯೧ ಕೋಟಿ ರೂಪಾಯಿ ಮೊತ್ತ ಅನುದಾನ
೧) ಕಲಬುರಗಿ ಜಿಲ್ಲೆ, ಆಳಂದ ತಾಲೂಕು ಮಿನಿ ವಿಧಾನಸೌಧ ಕಟ್ಟಡಕ್ಕೆ ಕಾಮಗಾರಿಯ ೧೨.೪೮ ಕೋಟಿ ರೂಪಾಯಿ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.
೨) ಮಂಗಳೂರು ಮಹಾನಗರ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯ ನಿರ್ವಹಣೆಗೆ ರೂಪಾಯಿ ೭೩.೭ ಕೋಟಿ ವಿಸ್ತ್ರತ ಯೋಜನಾ ವರದಿಗೆ ಅನುಮೋದನೆ
೩) ಆಝಾದಿ ಅಮೃತ ಮಹೋತ್ಸವ ಹಿನ್ನೆಲೆ ಮುಖ್ಯಮಂತ್ರಿ ಘೋಷಣೆ ಮಾಡಿದ ಕಾರ್ಯಕ್ರಮಗಳಿಗೆ ಅನುಮೋದನೆ. ಅಮೃತ ನಗರಿ ಕಾರ್ಯಕ್ರಮಕ್ಕೆ ೭೫ ಕೋಟಿಗೆ ಅನುಮೋದನೆ.